ಸ್ಟಾರ್ ಹೀರೋಗಾಗಿ 7 ದಿನ ಉಪವಾಸ ಮಾಡಿದ್ರು ಶ್ರೀದೇವಿ! superstar ಯಾರು ಗೊತ್ತಾ?

sridevi
Published on

ಮುಂಬೈ: (superstar) ನಟಿ ಶ್ರೀದೇವಿ ಭಾರತೀಯ ಚಿತ್ರರಂಗದಲ್ಲಿ ಮೆಚ್ಚುಗೆ ಪಡೆದ ನಟಿ. ಸೂಪರ್​ ಹಿಟ್​ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಕೆಲವು ನಟರೊಂದಿಗೆ ಉತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಹೊಂದಿದ್ದ ನಟಿ ಶ್ರೀದೇವಿ ತೆರೆಯ ಹಿಂದೆಯೂ ಸಹ ಒಂದು ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಒಬ್ಬ ನಟನಿಗಾಗಿ ಶ್ರೀದೇವಿ ಏಳು ದಿನಗಳ ಕಾಲ ಉಪವಾಸ ಮಾಡಿದ್ದರು. ಯಾರು ಈ ನಟ ಎನ್ನುವ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಶ್ರೀದೇವಿ ಅಂದು ಊಪವಾಸ ಮಾಡಿದ್ದು, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಾಗಿ. ಶ್ರೀದೇವಿ ಜತೆ ಒಂದಲ್ಲ ಎರಡಲ್ಲ ಹಲವು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.  2011ರಲ್ಲಿ ಜನಪ್ರಿಯ ನಟ ರಜನಿಕಾಂತ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಆರೋಗ್ಯದ ಬಗ್ಗೆ ತಿಳಿದ ಶ್ರೀದೇವಿ ಮತ್ತು ಶಿರಡಿ ಸಾಯಿಬಾಬಾ ಹೆಸರಿನಲ್ಲಿ ಉಪವಾಸ ಮಾಡಿದರು.

ರಜನಿಕಾಂತ್ ಅವರು ಶೀಘ್ರ ಗುಣಮುಖರಾಗಲು ಏಳು ದಿನಗಳ ಕಾಲ ಉಪವಾಸ ನಡೆಸಿದರು. ಪುಣೆ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

2011 ರಲ್ಲಿ, ರಜನಿಕಾಂತ್ ಅವರ ಆರೋಗ್ಯವು ಹದಗೆಟ್ಟಾಗ, ಅವರು ರವಿಕುಮಾರ್ ನಿರ್ದೇಶನದ ರಾಣಾ ಚಿತ್ರೀಕರಣದಲ್ಲಿ ತೊಡಗಿದ್ದರು. ಆದರೆ, ಶ್ರೀದೇವಿಯವರ ಉಪವಾಸ ಮತ್ತು ಅವರ ಎಲ್ಲಾ ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ರಜನಿಕಾಂತ್ ಅವರು ತಮ್ಮ ಆರೋಗ್ಯವನ್ನು ಮರಳಿ ಪಡೆದರು.

ರಜನಿಕಾಂತ್ ಅವರು ಶ್ರೀದೇವಿಯೊಂದಿಗೆ ಮಾತ್ರವಲ್ಲದೆ ಅವರ ತಾಯಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ಆರಂಭದ ದಿನಗಳಲ್ಲಿ ನಾನು ಕಮಲ್ ಹಾಸನ್ ಅವರಂತೆ ಉತ್ತಮ ನಟನಾಗುತ್ತೇನೆ, ಅವರಂತೆ ಉತ್ತಮ ಸಂಭಾವನೆ ಪಡೆಯುತ್ತೇನೆ ಎಂದು ಶ್ರೀದೇವಿ ತಾಯಿಗೆ ರಜನಿಕಾಂತ್  ಹೇಳುತ್ತಿದ್ದರು.   ಉತ್ತಮ ನಟನಾಗಿ ಬೆಳೆಯುತ್ತೀರಿ ಎಂದು ಶ್ರೀದೇವಿ ತಾಯಿ ಅನೇಕ ಬಾರಿ ಆಶೀರ್ವದಿಸಿದ್ದರು ಎನ್ನಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ , ಶ್ರೀದೇವಿ ಜತೆ ಒಂದಲ್ಲ ಎರಡಲ್ಲ ಹಲವು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ರಜನಿಕಾಂತ್ ಮತ್ತು ಶ್ರೀದೇವಿ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ, ಅವುಗಳಲ್ಲಿ ಹಲವು ಬ್ಲಾಕ್ಬಸ್ಟರ್ಗಳಾಗಿವೆ. ನಾನ್ ಆದಿಮೈ ಇಲ್ಲೈ, ಪೋಕಿರಿ ರಾಜಾ, ಭಗವಾನ್ ದಾದಾ, ಶಾಲ್ಬಾಸ್ ಮುಂತಾದ ಸಿನಿಮಾಗಳು ಇವರಿಬ್ಬರು ಜೊತೆಯಾಗಿ ನಟಿಸಿದ ಮೆಗಾಹಿಟ್ ಚಿತ್ರಗಳು. ಶ್ರೀದೇವಿ 15ನೇ ವಯಸ್ಸಿನಲ್ಲಿ ರಜನಿಕಾಂತ್ ಜೊತೆ ಕೆಲಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net