

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಪರಭಾಷೆಯಲ್ಲೂ ಕಾಣಿಸಿಕೊಳ್ಳುವ ಮೂಲಕವಾಗಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳು, ಎಲ್ಲ ಪಾತ್ರಗಳು... ಒಂದೆಡೆ ಅಧ್ಯಯನ, ಇನ್ನೊಂದೆಡೆ ನಟನೆ... ಹೇಗೆ ಬ್ಯಾಲೆನ್ಸ್ ಮಾಡುತ್ತಾರೆ ಎನ್ನವು ಪ್ರಶ್ನೆ ಅವರ ಅಭಿಮಾನಿಗಳಿಗೆ ಇದೆ. ಈ ಕುರಿತಾಗಿ ಸ್ವತಃ ಅವರೆ ಉತ್ತರ ನೀಡಿದ್ದಾರೆ.
ಒಂದೆಡೆ ಅಧ್ಯಯನ, ಇನ್ನೊಂದೆಡೆ ನಟನೆ... ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ? ಯಾರಾದರೂ ಶ್ರೀಲಿಯನ್ನು ಕೇಳಿದರೆ ಉತ್ತರ ಒಂದೇ. ಅದೇ... ಸ್ವಿಚ್ಆಫ್ ಮತ್ತು ಸ್ವಿಚಾನ್ ಮೋಡ್. ಅದೇ ತನ್ನ ಶಕ್ತಿ. ಒಂದೇ ದಿನದಲ್ಲಿ ಮೂರು ಸಿನಿಮಾಗಳ ಸೆಟ್‌ಗೆ ಎಂಟ್ರಿ ಕೊಟ್ಟರು ನಾನು ತೊಂದರೆ ಎಂದು ಭಾವಿಸುವುದಿಲ್ಲ. ಸೆಟ್‌ನಿಂದ ಹೊರಬರುವಾಗ ಆ ವಿಷಯಗಳನ್ನು ಮರೆತುಬಿಡುತ್ತೇವೆ. ನನ್ನ ಕೆಲಸಗಳಲ್ಲಿ ನಾನು ತೊಡಗಿಕೊಳ್ಳುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಶ್ರೀಲೀಲಾ.
ಶ್ರೀಲೀಲಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾಳೆ ಎಂದು ಯಾರಾದರೂ ಹೊಗಳಿದಾಗ ಬೂಸ್ಟ್ ಆಗುತ್ತದೆ. ಅದಕ್ಕಿಂತ ಹೆಚ್ಚಿನ ಎನರ್ಜಿಯಿಂದ ಮುಂದಿನ ಹಾಡಿಗೆ ತಯಾರಿ ನಡೆಸುತ್ತೇನೆ. ಕೆಲಸವನ್ನು ಎಂಜಾಯ್ ಮಾಡಲು ಆರಂಭಿಸಿದರೆ ಒತ್ತಡವೇ ಇರುವುದಿಲ್ಲ ಎಂಬ ಸಿದ್ಧಾಂತವನ್ನು ನಂಬಿದ್ದೇನೆ ಎನ್ನುತ್ತಾರೆ ಶ್ರೀಲೀಲಾ.
ಶ್ರೀಲೀಲಾ ಟಾಪ್ ಹೀರೋಯಿನ್ ,ಅದ್ಭುತ ಡ್ಯಾನ್ಸರ್ ಕೂಡಾ ಹೌದು. ನಟ ಮಹೇಶ್ ಬಾಬು ಅವರಿಂಲೂ ಶ್ರೀಲೀಲಾ ಅದ್ಭುತ ಎನ್ನುವ ಮೆಚ್ಚುಗೆ ಪಡೆದಿದ್ದಾರೆ.