ಕಡೆಗೂ ವದಂತಿಗಳಿಗೆ ತೆರೆ! ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ತರುಣ್ ಸುಧೀರ್​-ಸೋನಲ್ ಜೋಡಿ

ವಿಜಯವಾಣಿ-93
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕನ್ನಡ ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮದುವೆ ಸುದ್ದಿ, ಇದೀಗ ದೃಢವಾಗಿದೆ. ಕಡೆಗೂ ತಮ್ಮಿಬ್ಬರ ನಡುವಿನ ಮದುವೆ ವಿಚಾರವನ್ನು ತರುಣ್ ಹಾಗೂ ಸೋನಲ್ ಅಧಿಕೃತವಾಗಿ ಘೋಷಿಸಿದ್ದಾರೆ.

ಮದುವೆಯ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿರುವ ನವಜೋಡಿ, ತಮ್ಮಿಬ್ಬರ ವಿವಾಹ ವಿಚಾರವನ್ನು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ. 'ಕಾಟೇರ' ನಿರ್ದೇಶಕನ ಬಾಳಿಗೆ ಎಂಟ್ರಿಕೊಟ್ಟ ಸ್ಯಾಂಡಲ್​ವುಡ್​ ನಟಿ ಸೋನಲ್​ಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿವೆ. ಚಿತ್ರಮಂದಿರದಲ್ಲಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಸದ್ಯ ಎಲ್ಲರ ಗಮನಸೆಳೆದಿದ್ದಾರೆ.

ಇದೇ ಆಗಸ್ಟ್ 10,11ಕ್ಕೆ ತರುಣ್ ಮತ್ತು ಸೋನಾಲ್ ಸಪ್ತಪದಿ ತುಳಿಯಲಿದ್ದು, ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಫ್ಯಾಲೆಸ್​ನಲ್ಲಿ ನವಜೋಡಿಗಳ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net