

Actress Shobana: ಮಾಲಿವುಡ್ ದಿಗ್ಗಜ ನಟ, ಮಮ್ಮುಟ್ಟಿ ಕುರಿತಂತೆ ಅಚ್ಚರಿ ಹೇಳಿಕೆ ನೀಡಿರುವ ಬಹುಭಾಷಾ ನಟಿ ಶೋಬಾನಾ, ಇತ್ತೀಚಿನ ಸಂದರ್ಶನವೊಂದರಲ್ಲಿ ರಾಜಕೀಯ, ಸಿನಿಮಾ ಮತ್ತು ತಮ್ಮ ಕನಸಿನ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಚಿತ್ರೋದ್ಯಮದಲ್ಲಿ ಆಗಿರುವ ತಾಂತ್ರಿಕ ಬದಲಾವಣೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ, "ಸಿನಿಮಾದಲ್ಲಿ ಬಹಳಷ್ಟು ತಾಂತ್ರಿಕ ಬದಲಾವಣೆಗಳು ಆಗಿವೆ. ನಾನು ಈ ಹಿಂದೆ ನಟಿಸಿದ ಸಿನಿಮಾಗಳು ಬಹಳ ಸುಂದರವಾಗಿವೆ. ಇಷ್ಟು ವರ್ಷಗಳ ಸಿನಿಪಯಣದಲ್ಲಿ ನನಗೆ ತುಂಬ ಕಾಡುವುದು, ನಾನು ತೃತೀಯ ಲಿಂಗಿ ಪಾತ್ರವನ್ನು ಮಾಡಬೇಕೆಂದು. ಈ ಕುರಿತು ಒಂದಷ್ಟು ಸಿನಿಮಾ ಕಥೆಗಾರರೊಂದಿಗೆ ಮಾತನಾಡಿದ್ದೇನೆ. ಆದರೆ, ಅವರು ಹೆದರಿ, ಈ ಪ್ರಾಜೆಕ್ಟ್ ಸೋಲು ಕಾಣಬಹುದು ಎಂದು ಅಭಿಪ್ರಾಯಿಸಿದರು" ಎಂದರು.
"ಇದೇ 'ಕಾತಲ್'ನಲ್ಲಿ ಮಮ್ಮುಟ್ಟಿ ನಿರ್ವಹಿಸಿದ ಪಾತ್ರವನ್ನು ಎಲ್ಲರೂ ಸ್ವೀಕರಿಸಲಿಲ್ಲವೇ? ಅದೇ ಮಮ್ಮುಟ್ಟಿ ಅದನ್ನು ಮಾಡಲು ಸಾಧ್ಯ ಅಂದಮೇಲೆ, ನನ್ನಿಂದಲೂ ಕೂಡ ಸಾಧ್ಯವೇ. ನಾನು ಅಂತಹ ಪಾತ್ರಕ್ಕಾಗಿ ಎದುರುನೋಡುತ್ತಿದ್ದೇನೆ. ನಾನು ನನ್ನ ದೃಷ್ಟಿಯನ್ನು ಬದಲಾಯಿಸಲು ಮತ್ತು ನಟಿಸಲು ಬಯಸಿರುವೆ. ನನಗೆ ರಾಜಕೀಯದಲ್ಲಿಯೂ ಆಸಕ್ತಿಯಿದೆ ಎಂದು ನಾನು ಈ ಮೊದಲೇ ಹೇಳಿದ್ದೀನಿ. ಅದು ಇಂದಿಗೂ ಹಾಗೆಯೇ ಉಳಿದಿದೆ. ಜನರಿಗೆ ಸೇವೆ ಮಾಡಲು ಖುಷಿಯಿದೆ. ನಮ್ಮಲ್ಲಿ, ಸುರೇಶ್ ಗೋಪಿ ಹೇಗೆ ರಾಜಕಾರಣದಲ್ಲಿ ಇದ್ದಾರೋ, ಹಾಗೆಯೇ ನಾನು ಮುಂದುವರಿಯಲು ನೋಡುತ್ತಿರುವೆ. ಇಲ್ಲಿ ಸುರೇಶ್ ನನಗೆ ಒಳ್ಳೆಯ ಸ್ನೇಹಿತ. ಇದೇ ಕಾರಣಕ್ಕೆ, ಹಲವರು ಮುಂದಿನ ದಿನಗಳಲ್ಲಿ ನಾನು ಬಿಜೆಪಿ ಸೇರುತ್ತೇನೆ" ಎಂದು ಭಾವಿಸಿದ್ದಾರೆ,(ಏಜೆನ್ಸೀಸ್).