

Bastian Bandra: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಅವರ ಕುಟುಂಬವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಿಳಿದುಬರುತ್ತಿದೆ. ನಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಆರೋಪಗಳು ಕೇಳಿಬಂದ ನಂತರ ಇವರು ಮುಂಬೈನಲ್ಲಿರುವ ತಮ್ಮ ಐಷರಾಮಿ ರೆಸ್ಟೋರೆಂಟ್ವೊಂದನ್ನು ಮುಚ್ಚುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾರೆ.
ನಟಿ ಶಿಲ್ಪಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್ನ ಸೌಲಭ್ಯವನ್ನು ಸ್ಥಗಿತಗೊಳಿಸುವುದರ ಬಗ್ಗೆ ತಮ್ಮ ಅನುಯಾಯಿಗಳಿಗೆ ತಿಳಿಸಲು ದೀರ್ಘ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ.
ಈ ಗುರುವಾರ ಮುಂಬೈನ ಅತ್ಯಂತ ಪ್ರತಿಷ್ಠಿತ ತಾಣಗಳಲ್ಲಿ ಒಂದಾದ ಬಾಸ್ಟಿಯನ್ ಬಾಂದ್ರಾಕ್ಕೆ ನಾವು ವಿದಾಯ ಹೇಳುತ್ತಿರುವುದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಈ ಜಾಗ ಲೆಕ್ಕವಿಲ್ಲದಷ್ಟು ನೆನಪುಗಳನ್ನು ನೀಡಿದೆ. ಮರೆಯಲಾಗದ ರಾತ್ರಿಗಳು ಹಾಗೂ ನಗರದ ರಾತ್ರಿ ಜೀವನವನ್ನು ರೂಪಿಸಿದ ಕ್ಷಣಗಳನ್ನು ನೀಡಿದ ಸ್ಥಳಕ್ಕೆ ಅಂತಿಮ ವಿದಾಯ ಹೇಳುತ್ತಿದ್ದೇವೆ ಎಂದು ಬರೆದಿದ್ದಾರೆ.
ಈ ಸ್ಥಳವನ್ನು ಗೌರವಿಸಲು ನಾವು ನಮಗೆ ಹತ್ತಿರ ಇರುವ ಪೋಷಕರಿಗಾಗಿ ಒಂದು ವಿಶೇಷ ಸಂಜೆಯನ್ನು ಏರ್ಪಡಿಸುತ್ತಿದ್ದೇವೆ. ಈ ರಾತ್ರಿ ಶಕ್ತಿ ಮತ್ತು ಮ್ಯಾಜಿಕ್ನಿಂದ ತುಂಬಿರುತ್ತದೆ. ಹಾಗೇಯೇ ಬಾಸ್ಟಿಯನ್ ಕೊನೆಯ ಬಾರಿಗೆ ನಿಂತಿದೆಲ್ಲವನ್ನೂ ಆಚರಿಸುತ್ತದೆ. ನಾವು ಬಾಸ್ಟಿಯನ್ಗೆ ವಿದಾಯ ಹೇಳುವಾಗ ನಾವು ಆಚರಿಸುವ ಆರ್ಕೇನ್ ಅಫೇರ್ ಮುಂದಿನ ವಾರ ಅದು ಬಾಸ್ಟಿಯನ್ ಅಟ್ ದಿ ಟಾಪ್ನಲ್ಲಿ ಮುಂದುವರೆದಿರುತ್ತದೆ. ಇದು ಹೊಚ್ಚ ಹೊಸ ಅನುಭವಗಳೊಂದಿಗೆ ಹೊಸ ಪರಂಪರೆಯಲ್ಲಿ ಮುಂದೆ ಸಾಗುತ್ತದೆ ಎಂಬ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಬಾಸ್ಟಿಯನ್ ಬಾಂದ್ರಾ ನಟಿ ಶಿಲ್ಪಾ ಶೆಟ್ಟಿ ಹಾಗೂ ಮಾಲೀಕರಾದ ರಂಜಿತ್ ಬಿಂದ್ರಾ ಅವರ ಮಾಲೀಕತ್ವದಲ್ಲಿದೆ. ಇದು ಮೊದಲು 2016 ರಲ್ಲಿ ಪ್ರಾರಂಭವಾಗಿತ್ತು. ನಂತರ 2023ರಲ್ಲಿ ಬಾಂದ್ರಾಕ್ಕೆ ಸ್ಥಳಾಂತರಗೊಂಡು ಮತ್ತೆ ತೆರಯಲ್ಪಟ್ಟಿತ್ತು. ಈ ರೆಸ್ಟೋರೆಂಟ್ ತನ್ನ ವಿಶೇಷ ಕಲಾತ್ಮಕ ಅಲಂಕಾರಕ್ಕೆ ಹೆಸರುವಾಸಿಯಾಗಿದೆ.
ಈ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ 60.4 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದ ಹಿನ್ನಲೆ ಆರ್ಥಿಕ ಅಪಾರಧ ವಿಭಾಗದ ಅಡಿಯಲ್ಲಿ ಈ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. (ಏಜೆನ್ಸೀಸ್)