

Star Actress: ಬದುಕಿನಲ್ಲಿ ಯಾವಾಗ? ಏನು ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ನಾವು ಬಯಸಿದಂತೆ ಬಾಳಲ್ಲಿ ಏನೂ ನಡೆಯುವುದಿಲ್ಲ ಎಂಬುದಕ್ಕೆ ನಮ್ಮ ಮುಂದೆ ಇರುವ ಅನೇಕರ ಜೀವನವೇ ಒಂದು ಅದ್ಭುತವಾದ ನಿದರ್ಶನ. ಅದೇ ರೀತಿ ಇಲ್ಲೊಬ್ಬ ಖ್ಯಾತ ನಟಿ ತಾವು ಬಾಲ್ಯದಲ್ಲೇ ಕಷ್ಟಗಳ ಸರಮಾಲೆಯನ್ನು ಹೊತ್ತು ಮುಂಬರುವ ದಿನಗಳಲ್ಲಿ ಒಳ್ಳೆ ಜೀವನವನ್ನು ಕಾಣುತ್ತೇನೆ ಎಂದು ಅಂದುಕೊಂಡರು ಅದು ನಿಜವಾಗದೇ, ಕಷ್ಟಗಳ ಕಗ್ಗಂಟ್ಟಿನಲ್ಲಿ ಸಿಲುಕಿದ್ದು ನಿಜಕ್ಕೂ ದುರದೃಷ್ಟಕರ.
ಎಲ್ಲರಿಗೂ ಓದುವ ಹಂಬಲ ಇದ್ದೇ ಇರುತ್ತದೆ. ಆದರೆ, ಕುಟುಂಬದಲ್ಲಿನ ಹಲವು ಸಮಸ್ಯೆಗಳು ವಿದ್ಯಾಭ್ಯಾಸಕ್ಕೆ ಕತ್ತರಿ ಹಾಕುವುದರ ಜತೆಗೆ ಬಾಲ್ಯದ ಆನಂದ ಅನುಭವವನ್ನು ಸಹ ಕಸಿದುಕೊಳ್ಳುತ್ತದೆ. ಅದರಂತೆಯೇ ಈ ನಟಿಯ ಬಾಳಿನಲ್ಲಿ ವಿಧಿ ಘೋರವಾಗಿ ಆಟವಾಡಿದ್ದು, ಐದು ವರ್ಷದ ವಯಸ್ಸಿನಲ್ಲೇ ಕೆಲಸಕ್ಕೆ ಹೋಗುವಂತ ಪರಿಸ್ಥಿಗಳು ಎದುರಾಗಿತ್ತು. ಎರಡು ರಾಷ್ಟ್ರಪ್ರಶಸ್ತಿ ಪಡೆದ ನಟಿಯ ಬಾಳಲ್ಲಿ ಯಶಸ್ಸು ಮಾತ್ರ ಮಿಂಚಿನಂತೆ ಬಂದು ಹೋಗಿದೆ. ಆದ್ರೂ ಸಹ ಧೃತಿಗೆಡೆದೆ ತಮ್ಮ ಅಭಿವೃದ್ಧಿಯತ್ತ ಹೆಚ್ಚು ಶ್ರಮಿಸಿದ್ದಾರೆ.
ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆಯಲಾಗದೆ, ಐದನೇ ವಯಸ್ಸಿಗೆ ಕೆಲಸಕ್ಕೆ ಹೊರಟ ಈ ಕಲಾವಿದೆ, ಬಹಳ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಿ, ತನ್ನ ಕುಟುಂಬಕ್ಕೆ ದುಡಿದ ಹಣವನ್ನು ತಂದುಕೊಡುವ ಮೂಲಕ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಅಷ್ಟಕ್ಕೂ ಈ ಖ್ಯಾತ ನಟಿ ಬೇರಾರು ಅಲ್ಲ, 90ರ ದಶಕದಲ್ಲಿ ತನ್ನದೇ ಛಾಪು ಮೂಡಿಸಿ, ಸ್ಟಾರ್ಡಮ್ ರೂಪಿಸಿದ್ದ ಸಾರಿಕಾ. ಭಾರತೀಯ ಚಿತ್ರರಂಗದ ಹಿರಿಯ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಈ ನಟಿ ಪಟ್ಟ ಒದ್ದಾಟಗಳು ಅಷ್ಟಿಷ್ಟಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಬಾಲ ಕಲಾವಿದೆಯಾಗಿ, ಸಾರಿಕಾ ‘ಮಜ್ಲಿ ದೀದಿ’, ‘ಹಮ್ರಾಜ್’, ‘ಸತ್ಯಕಾಮ್’ ಮತ್ತು ಇತರ ಚಲನಚಿತ್ರಗಳು ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ಕೆಲಸ ಮಾಡಿ, ಚಿತ್ರರಂಗದಲ್ಲಿ ಗುರುತಿಸಿಕೊಂಡರು. ರಾಜಶ್ರೀ ಪ್ರೊಡಕ್ಷನ್ಸ್ನ ‘ಗೀತ್ ಗಾತಾ ಚಲ್’ ಮೂಲಕ ಪಾದಾರ್ಪಣೆ ಮಾಡಿದ ಸಾರಿಕಾ, ತಮ್ಮ 15ನೇ ವಯಸ್ಸಿಗೆ ಸ್ಟಾರ್ ನಟಿಯಾಗಿ ಖ್ಯಾತಿಯನ್ನು ಹೆಚ್ಚಿಸಿಕೊಂಡರು. ಓದು-ಬರಹ ಕಷ್ಟವಾದರೂ ಅವರು ಕಲಿತದ್ದೆಲ್ಲಾ ಚಲನಚಿತ್ರ ಎಂಬ ಶಾಲೆಯಲ್ಲಿ ಎಂಬುದು ಮತ್ತೊಂದು ವಿಶೇಷ.
ಹಳೆಯ ಸಂದರ್ಶನವೊಂದರಲ್ಲಿ ಒಂದಷ್ಟು ವಿಷಯ ಹಂಚಿಕೊಂಡ ಅವರು, “ಇದು ನನ್ನ ಹಣೆಬರಹವಾಗಿತ್ತು. ಜೀವನವು ನನ್ನನ್ನು ಆ ಹಾದಿಯಲ್ಲಿ ಕೊಂಡೊಯ್ದಿತು. ಆ ಸಮಯದಲ್ಲಿ ನನಗೆ ತುಂಬ ಬೇಸರವಾಯಿತು. ನಾನು ಜೀವನದ ಒಂದು ಉತ್ತಮ ಭಾಗವನ್ನು ನೋಡಿದ್ದೇನೆ. ಅಂದು ಚಿತ್ರರಂಗವೇ ನನಗೆ ಶಾಲೆ-ಕಾಲೇಜು ಆಗಿತ್ತು. ನಾನು ಕೆಲಸ ಮಾಡಿದ ನಿರ್ದೇಶಕರು ಮತ್ತು ನಟರೇ ನನಗೆ ಶಿಕ್ಷಕರಾಗಿದ್ದರು” ಎಂದು ಹೇಳಿಕೊಂಡಿದ್ದಾರೆ.
ಬದುಕಿನ ಪ್ರತಿ ಹಂತದಲ್ಲೂ ಕಷ್ಟವನ್ನು ಎದುರಿಸಿದ ಸಾರಿಕಾ ಕುಗ್ಗದೆ ಜೀವಿಸುವ ಮುಖೇನ ತಮ್ಮ ನಟನೆಯ ಹಾದಿಯನ್ನು ತ್ಯಜಿಸದೆ, ಇಂದಿಗೂ ಸಹ ಮುಂದುವರೆಸಿದ್ದಾರೆ. ಇವರು ತಮಿಳು ಚಿತ್ರರಂಗದ ನಟ, ಬಹುಭಾಷಾ ಸ್ಟಾರ್ ಕಮಲ್ ಹಾಸನ್ ಅವರ ಪತ್ನಿಯಾಗಿದ್ದರು. 2004ರಲ್ಲಿ ಅವರೊಂದಿಗೆ ವಿಚ್ಚೇದನ ಪಡೆಯುವ ಮೂಲಕ ದೂರ ಉಳಿದರು,(ಏಜೆನ್ಸೀಸ್).