

ಬೆಂಗಳೂರು: ಪರಭಾಷಾ ನಟಿ ಶರಣ್ಯಾ ಪೊನ್ವಣ್ಣನ್ ಗೊತ್ತಿಲ್ಲದ ಪ್ರೇಕ್ಷಕರೇ ಇರುವುದಿಲ್ಲ. ತಾಯಿ ಪಾತ್ರದಲ್ಲಿ ಶರಣ್ಯಾ ಪೊನ್ವಣ್ಣನ್ ಅದ್ಭುತ ಅಭಿನಯ ನೀಡಿದ್ದಾರೆ. ಕನ್ನಡ, ಹಿಂದಿ, ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಶರಣ್ಯ ನಟಿಸಿದ್ದಾರೆ.
ಶರಣ್ಯ ಪೊನ್ವಣ್ಣನ್ ತಮಿಳು , ತೆಲುಗು ಮತ್ತು ಮಲಯಾಳಂ ಮತ್ತು ಕೆಲವು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ. ಮಣಿರತ್ನಂ ಅವರ ನಿರ್ಮಾಣದ ನಾಯಕನ್‌ನಲ್ಲಿ 1987 ರಲ್ಲಿ ಕಮಲ್ ಹಾಸನ್ ಎದುರು ನಾಯಕಿಯಾಗಿ ಶರಣ್ಯಾ ತಮಿಳು ಪಾದಾರ್ಪಣೆ ಮಾಡಿದರು . 1989 ರಲ್ಲಿ ನೀರಜನಂ ಚಿತ್ರದಲ್ಲಿ ಮೊದಲ ತೆಲುಗು ಕಾಣಿಸಿಕೊಂಡರು. ಅದೇ ವರ್ಷದಲ್ಲಿ ಮಮ್ಮುಟ್ಟಿ ಜೊತೆ ನಟಿಸಿದ ಅರ್ಥಮ್ ಚಿತ್ರದ ಮೂಲಕ ಆಕೆಯ ಮಲಯಾಳಂ ಚೊಚ್ಚಲ ಪ್ರವೇಶವಾಯಿತು. ನಂತರ ಸಾಲುಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ತೆಲಗು ಭಾಷೆಯಲ್ಲಿ ಸೂಪರ್ ಹಿಟ್ ಸಿನಿಮಾ ಮಾಡಿರುವ ನಟಿ ದಿ ವಿಲನ್, ಯಕ್ಷ ಹೀಗೆ ಅನೇಕ ಕನ್ನಡ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುವ ಮೂಲಕವಾಗಿ ಕನ್ನಡದ ಪ್ರೇಕ್ಷಕರಿಗೂ ಚಿರಪರಿಚಿತರು. ನಟಿ ಇದೀಗ ವಿವಾದದಲ್ಲಿ ಸಿಲುಕಿದ್ದಾಳೆ. ಪಾರ್ಕಿಂಗ್ ವಿವಾದ ಪೊಲೀಸ್ ಠಾಣೆಯವರೆಗೂ ಹೋಗಿದೆ.
ಪಾರ್ಕಿಂಗ್ ವಿಚಾರವಾಗಿ ಶರಣ್ಯಾ ಪೊನ್ವಣ್ಣನ್ ತನ್ನ ನೆರೆಹೊರೆಯವರೊಂದಿಗೆ ಜಗಳವಾಡಿದ್ದರು. ಈ ಪ್ರಕರಣ ಮುದರಿ ಪೊಲೀಸ್ ಠಾಣೆ ತಲುಪಿತು. ಶರಣ್ಯಾ ಪೊನ್ವಣ್ಣನ್ ವಿರುದ್ಧ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಶರಣ್ಯಾ ಪೊನ್ವಣ್ಣನ್ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶ್ರೀದೇವಿ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಚೆನ್ನೈನಲ್ಲಿರುವ ಶರಣ್ಯ ನಿವಾಸ ವಿರುಂಗಬಕ್ಕಂನಲ್ಲಿ ವಾಹನ ನಿಲುಗಡೆ ವಿಚಾರವಾಗಿ ಜಗಳ ನಡೆದಿದೆ. ಇದೀಗ ವಿಷಯ ಪೊಲೀಸರ ಮೊರೆ ಹೋಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಶರಣ್ಯಾ ಪೊನ್ವಣ್ಣನ್ ತಮಿಳಿನ ಜೊತೆಗೆ ತೆಲುಗಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ. ರಘುವರನ್ ಅವರ ಬಿಟೆಕ್ ಮತ್ತು ವೇದಂನಲ್ಲಿ ಶರಣ್ಯ ತಮ್ಮ ಅಭಿನಯದಿಂದ ಪ್ರಭಾವಿತರಾದರು.