ನಟಿ ಸಂಗೀತಾ ಭಟ್ ಆಸ್ಪತ್ರೆಗೆ ದಾಖಲು! ಸರ್ಜರಿಗೊಳಗಾದ ನಟಿ..Sangeetha Bhat

Sangeetha Bhat
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಸಂಗೀತಾ ಭಟ್ ( Sangeetha Bhat )​​ ಅವರು ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಾಗಿ ನಟಿ ಇನ್​​​ಸ್ಟಾಗ್ರಾಮ್​​​ನಲ್ಲಿ ಕೆಲವು ಫೋಟೋಗಳ್ನು ಹಂಚಿಕೊಂಡಿದ್ದಾರೆ.

ಸಂಗೀತಾ ಭಟ್ ಕಳೆದ ಹಲವು ತಿಂಗಳುಗಳಿಂದ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಗರ್ಭಕೋಶದಲ್ಲಿ 1.75 ಸೆ.ಮೀ ಉದ್ದದ ಗೆಡ್ಡೆಯೊಂದು ಬೆಳೆದಿರುವುದು ತಿಳಿದು ಬಂದಿದೆ. ಈ ಗೆಡ್ಡೆಯಿಂದಾಗಿ ಸಂಗೀತಾ ಭಟ್ ಸಾಕಷ್ಟು ನೋವು, ಅತಿಯಾದ ರಕ್ತಸ್ರಾವ ಇನ್ನೂ ಹಲವು ರೀತಿಯ ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇನು. ಮದರ್​​ಹುಡ್ ಆಸ್ಪತ್ರೆಯಲ್ಲಿ ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ನಮ್ಮ ಪಾಲಿಗೆ ಅತ್ಯಂತ ಕಠಿಣ ದಿನಗಳಾಗಿದ್ದವು. ಪ್ರತಿ ನಿಮಿಷವೂ ವರ್ಷಗಳಂತೆ ಕಳೆದವು. ಈ ಸಮಸ್ಯೆ ಉಳ್ಳವರಿಗೆ ಅತಿಯಾದ ರಕ್ತಸ್ರಾವ ಆಗುತ್ತದೆ. ಕಿಬ್ಬೊಟ್ಟೆ ಭಾಗದಲ್ಲಿ ಅಸಹನೀಯ ನೋವು, ದೇಹದ ತೂಕ ಹೆಚ್ಚಳ, ಅತಿಯಾದ ಸುಸ್ತು, ನಿರಾಸಕ್ತಿ, ಋತುಚಕ್ರ ಅಸಹಜವಾಗಿರುತ್ತದೆ. ಕೂದಲು ಉದುರುವಿಕೆ ಸಹ ಆಗುತ್ತದೆ. ಚಿಕಿತ್ಸೆ ಪಡೆದುಕೊಳ್ಳುವುದು ಎಂದರೆ ಅದು ಬಲಹೀನತೆ ಅಲ್ಲ ಬದಲಿಗೆ ಅದು ಧೈರ್ಯ, ನಿಮ್ಮ ದೇಹಕ್ಕೆ ಸ್ಪಂದಿಸುವ ರೀತಿ ಎಂದು ಬರೆದುಕೊಂಡು ಪತಿ ಸುದರ್ಶನ್ ಮತ್ತು ವೈದ್ಯ ರೋಹಿತಾ ಅವರಿಗೆ ಧನ್ಯವಾದ ಹೇಳಿದ್ದಾರೆ.

ಸಂಗೀತಾ ಭಟ್ ಅವರ ಪೋಸ್ಟ್​​ಗೆ ನಟಿ ರಕ್ಷಿತಾ ಪ್ರೇಮ್, ನಟಿ ಸೋನು ಗೌಡ ಹಾಗೂ ಅನೇಕ ನಟ- ನಟಿಯರು ಅವರು ಪ್ರತಿಕ್ರಿಯೆ ನೀಡಿ ಬೇಗ ಹುಷಾರು ಆಗಿ ಎಂದು ಧೈರ್ಯ ತುಂಬಿ ಕಾಮೆಂಟ್​​ ಮಾಡಿದ್ದಾರೆ.

‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’, ಇತ್ತೀಚೆಗಿನ ‘ಕಮಲ್ ಶ್ರೀದೇವಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಸಂಗೀತಾ ಭಟ್ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net