

ಗುಜರಾತ್ : ಗುಜರಾತ್ ಸಂಪುಟದ ( new cabinet in gujarat ) ಪುನಾರಚನೆ ನಡೆದಿದ್ದು, ಹಲವು ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ಕೊಡಲಾಗಿದೆ. ಸಿಎಂ ಭೂಪೇಂದ್ರ ಪಟೇಲ್ ನೇತೃತ್ವದ ಸಂಪುಟದಲ್ಲಿ 26 ಮಂದಿ ಸಚಿವರಿರಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ಹೊಸ ಸಚಿವರ ಪಟ್ಟಿಯನ್ನು ಸಲ್ಲಿಸಿದರು. ಗುಜರಾತ್ನಲ್ಲಿ ಇಪ್ಪತ್ತೈದು ಹೊಸ ಸಚಿವರನ್ನು ನೇಮಿಸಲಾಗಿದೆ. ಈ ಎಲ್ಲಾ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಗುಜರಾತ್ನಲ್ಲಿ ಹೊಸ ಸಚಿವ ಸಂಪುಟ ರಚನೆಯಾಗುವ ಒಂದು ದಿನದ ಮೊದಲು ಗುರುವಾರ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ 16 ಸಚಿವರು ರಾಜೀನಾಮೆ ನೀಡಿದರು ಎಂಬುದನ್ನು ಗಮನಿಸಬೇಕು.
ಗುಜರಾತ್ ವಿಧಾನಸಭೆಯು ಒಟ್ಟು 182 ಸದಸ್ಯರನ್ನು ಹೊಂದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಡಿಸೆಂಬರ್ 12, 2022 ರಂದು ಎರಡನೇ ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಬಿಜೆಪಿ ನಾಯಕತ್ವದ ಜೊತೆಗೆ ಮುಖ್ಯಮಂತ್ರಿ, ರಾಜ್ಯ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದರು. ಸಭೆಯಲ್ಲಿ ಸಂಪುಟ ವಿಸ್ತರಣೆ ಮತ್ತು ಸಾಂಸ್ಥಿಕ ಪಾತ್ರಗಳಲ್ಲಿ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಭೂಪೇಂದ್ರ ಪಟೇಲ್ ಕ್ಯಾಬಿನೆಟ್ನಲ್ಲಿ ಯಾರೆಲ್ಲಾ ಇದ್ದಾರೆ?
ರಮೇಶ್ ಕಟಾರ ( Rameshbhai Bhurabhai Katara )
ರಾಮನ್ ಸೋಲಂಕಿ (Ramanbhai Bhikhabhai Solanki)
ಕಮಲೇಶ್ ಪಟೇಲ್ Kamleshbhai Rameshbhai Patel
ಸಂಜಯ್ ಸಿಂಗ್ ಮಹಿದಾ ( Sanjaysinh Rajaysinh Mahida )
ಸ್ವರೂಪ್ಜಿ ಠಾಕೂರ್
ಪ್ರವೀಣ್ ಮಾಲಿ ( Pravenkumar Mali)
ಮನೀಷಾ ವಕೀಲ್ (Manisha Rajivbhai Vakil )
ಈಶ್ವರ್ ಸಿಂಗ್ ಪಟೇಲ್ ( Ishwarsinh Thakorbhai Patel )
ತ್ರಿಕಂಭೈ ಛಂಗ
ಡಾ. ಜಯರಾಮ್ ಗಮಿತ್ ( Dr Jayrambhai Chemabhai Gamit )
ರೇವಾ ಬಾ ಜಡೇಜಾ ( Rivaba Ravindrasinh Jadeja )
ಜೀತುಭಾಯಿ ವಘಾನಿ ( Jitendrabhai Savjibhai Vaghani)
ದರ್ಶನಬೆನ್ ವಘೇಲಾ ( Darshana M Vaghela)
ಕೌಶಿಕ್ ವೆಕಾರಿಯ ( Kaushik Kantibhai Vekariya )
ಕಾಂತಿ ಅಮೃತಿಯಾ ( Kantratalal Shivalal Amrutia )
ಅರ್ಜುನ್ ಮೋಧ್ವಾಡಿಯಾ ( Arjunbhai Devabhai Modhwadia)
ಪಿ.ಸಿ. ಬರಂಡ ( PC Baranda)
ನರೇಶ್ ಪಟೇಲ್ ( Nareshbhai Maganbhai Patel )
ಪ್ರದ್ಯುಮ್ನ ವಾಜ ( Dr Pradyuman Vaja )
ಹರ್ಷ್ ಸಾಂಘ್ವಿ ( Harsh Sanghvi )
ಪರ್ಸೋತಮ್ ಸೋಲಂಕಿ ( Parshottambhai O. Solanki )
ಕನು ದೇಸಾಯಿ ( Kanubhai Mohanlal Desai)
ಋಷಿಕೇಶ್ ಪಟೇಲ್ (Rushikesh Ganeshbhai Patel)
ಕುನ್ವರ್ಜಿಭಾಯಿ ಬವಾಲಿಯಾ ( Kunwarjibhai Mohanbhai Bavaliya )
ಪ್ರಫುಲ್ ಪನ್ಸೇರಿಯಾ ( Praful Panseriya)