ಆಗಸ್ಟ್​ 12ಕ್ಕೆ ಸಮಂತಾ ನಟನೆಯ ಯಶೋದಾ ಚಿತ್ರ ಬಿಡುಗಡೆ

Samantha
Published on

"ಯಶೋದಾ' ಎಂಬ ಚಿತ್ರದಲ್ಲಿ ಸಮಂತಾ ನಟಿಸುತ್ತಿರುವ ವಿಷಯ ಗೊತ್ತು ತಾನೇ? ಶ್ರೀದೇವಿ ಮೂವೀಸ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಈ ವರ್ಷದ ಆರಂಭದಲ್ಲಿ ಸೆಟ್ಟೇರಿತ್ತು. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಆಗಸ್ಟ್​ 12ಕ್ಕೆ ಬಿಡುಗಡೆಯಾಗಲಿದೆಯಂತೆ. ಮೊದಲ ಹಂತವಾಗಿ ಚಿತ್ರದ ತುಣುಕೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

"ಯಶೋದಾ' ಚಿತ್ರದ ಶೇ. 80ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆಯಂತೆ. ಹೈದರಾಬಾದ್​ನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದ್ದು, ಕೊಡೈಕೆನಾಲ್​ನಲಿ ಕ್ಲೆಮ್ಯಾಕ್ಸ್​ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. ಒಟ್ಟಾರೆ ಜೂನ್​ ಒಂದರೊಳಗೆ ಚಿತ್ರೀಕರಣ ಮುಗಿಸಿ, ಮುಂದಿನ ಎರಡು ತಿಂಗಳಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮಾಡಿ, ಆಗಸ್ಟ್​ನಲ್ಲಿ ಚಿತ್ರವನ್ನು ತೆರೆಗೆ ತರುವುದು ಚಿತ್ರತಂಡದ ಯೋಚನೆ. ಈ ಚಿತ್ರವನ್ನು ಹರಿ ಮತ್ತು ಹರೀಶ್​ ನಿರ್ದೇಶಿಸುತ್ತಿದ್ದು, ಶಿವಲೆಂಕಾ ಕೃಷ್ಣ ಪ್ರಸಾದ್​ ನಿರ್ಮಾಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net