

tana-2025-event : ನಟಿ ಸಮಂತಾ ಅವರು ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ (TANA) ದ 2025 ರ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಮೇಲಿನ ಪ್ರೀತಿಗೆ ಅಮೆರಿಕದಲ್ಲಿರುವ ತೆಲುಗು ಜನರಿಗೆ ಧನ್ಯವಾದ ತಿಳಿಸಿದರು. ಅವರು ತೆಲುಗು ವಲಸಿಗರನ್ನು ಉದ್ದೇಶಿಸಿ ಹೃದಯಸ್ಪರ್ಶಿ ಭಾಷಣ ಮಾಡುವಾಗ ವೇದಿಕೆಯಲ್ಲಿ ಅಭಿಮಾನಿಗಳನ್ನು ಭಾವುಕರನ್ನಾಗಿಸಿ ಕಣ್ಣೀರಿಟ್ಟಿದ್ದಾರೆ.
ಇನ್ನೂ ಕಾರ್ಯಕ್ರಮ ನಿರೂಪಕಿ ಸುಮಾ ಅವರು ತಮ್ಮ ಸೀರೆ ಸೆರಗಿನಿಂದಲೇ ಸಮಂತಾಳ ಕಣ್ಣೀರು ಒರೆಸಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿ ನಿಂತು ಧನ್ಯವಾದ ಹೇಳೋಕೆ 15 ವರ್ಷ ಬೇಕಾಯ್ತು ಎಂದ ಸಮಂತಾ, ತಮ್ಮ ಮೊದಲ ಸಿನಿಮಾ 'ಯೇ ಮಾಯ ಚೇಸಾವೆ'ಯಿಂದಲೂ ತೆಲುಗು ಪ್ರೇಕ್ಷಕರು ಪ್ರೀತಿ ತೋರಿಸಿದ್ದಾರೆ, ನೀವು ನನ್ನನ್ನು ಮನೆಯ ಹುಡುಗಿಯಂತೆ ನೋಡಿಕೊಂಡಿದ್ದೀರಿ ಎಂದು ಭಾವುಕರಾದರು.
ಇಷ್ಟು ವರ್ಷಗಳಿಂದ ನಿಮಗೆ ಧನ್ಯವಾದ ಹೇಳುವ ಅವಕಾಶ ನನಗೆ ಸಿಕ್ಕಿದೆ. ಆರಂಭದಿಂದಲೂ, ನೀವು ನನಗೆ ಪ್ರೀತಿಯನ್ನು ನೀಡಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಪರವಾಗಿಲ್ಲ. ನೀವು ನನ್ನೊಂದಿಗಿದ್ದೀರಿ. ಈಗ ನಾನು ನನ್ನ ವೃತ್ತಿಜೀವನದಲ್ಲಿ ಒಂದು ಪ್ರಮುಖ ಹಂತದಲ್ಲಿದ್ದೇನೆ ಎಂದರು.
(ಏಜೆನ್ಸೀಸ್)
ನಿರ್ಮಾಪಕಿಯಾಗಿ 'ಶುಭಂ' ಚಿತ್ರ ನಿರ್ಮಿಸಿರುವ ಸಮಂತಾ, ಅಮೆರಿಕದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. ‘ನ್ನ ವೃತ್ತಿಜೀವನದ ಪ್ರತಿ ಹೆಜ್ಜೆಯಲ್ಲೂ ತೆಲುಗು ಪ್ರೇಕ್ಷಕರನ್ನು ಮೊದಲು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದರು.