ಟಾಲಿವುಡ್​ಗೆ ನಟಿ ರುಕ್ಮಿಣಿ ವಸಂತ್?; ಈ ನಟನೊಂದಿಗೆ ನಟಿಸಲಿದ್ದಾರೆ 'ಸಪ್ತಸಾಗರದಾಚೆ ಎಲ್ಲೋ' ಬೆಡಗಿ!

Untitled design (3)
Published on

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಸಪ್ತಸಾಗರದಾಚೆ ಎಲ್ಲೋ' ಸೈಡ್​ ಎ ಸಿನಿಮಾ ಮೂಲಕ ಕನ್ನಡ ಮತ್ತು ತೆಲುಗು ಸಿನಿಪ್ರೇಕ್ಷಕರನ್ನು ಮನರಂಜಿಸಿದ ನಟಿ ರುಕ್ಮಿಣಿ ವಸಂತ್, ಪ್ರಿಯಾ ಪಾತ್ರಕ್ಕೆ ವ್ಯಾಪಕ ಪ್ರಶಂಸೆ ಪಡೆದುಕೊಂಡರು. ಇದೀಗ ನಟಿ ಸ್ಯಾಂಡಲ್​ವುಡ್​ ನಂತರ ಟಾಲಿವುಡ್​ಗೂ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಟಾಲಿವುಡ್​ನ ಸ್ಟಾರ್​ ನಟ ರಾಮ್​ ಪೋತಿನೇನಿ ಜತೆ ರುಕ್ಮಿಣಿ ಅಭಿನಯಿಸಲಿದ್ದಾರೆ ಎಂಬ ವದಂತಿಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬೋಯಪತಿ ಶ್ರೀನು ನಿರ್ದೇಶನದ 'ಸ್ಕಂದ' ಚಿತ್ರದಲ್ಲಿ ರಾಮ್ ಪೋತಿನೇನಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಳಿಕ ರಾಮ್​ ಮುಂದಿನ ಸಿನಿಮಾದ ಬಗ್ಗೆ ಹೆಚ್ಚಿನ ಚರ್ಚೆ ನಡೆದಿರಲಿಲ್ಲ. ಆದ್ರೆ, ಈ ಸುದ್ದಿ ಇದೀಗ ಟಾಲಿವುಡ್​ ಮತ್ತು ಸ್ಯಾಂಡಲ್​ವುಡ್​ ಅಂಗಳದಲ್ಲಿ ಭಾರೀ ಸುದ್ದಿಯಾಗುತ್ತಿದೆ.

ಈ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗುತ್ತಿದೆ. ನಟಿ ರುಕ್ಮಿಣಿ ವಸಂತ್​ ಅಭಿನಯಿಸುವುದು ಖಚಿತವಾದರೆ ಈ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net