VIDEO | ಐಸ್​ ವಾಟರ್​ ಬ್ಯೂಟಿ ಟಿಪ್ಸ್​ ನೀಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Ragini Dwivedi
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜತೆಗೆ  ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಟಿ ಇದೀಗ ತಮ್ಮ ಬ್ಯೂಟಿ ಸಿಕ್ರೇಟ್​​ನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ.

ಐಸ್​ ನೀರಿನಲ್ಲಿ ಪ್ರತಿದಿನ ಮೂರು ನಿಮಿಷ ಮುಖವನ್ನಿಟ್ಟುಕೊಳ್ಳಿ. ಹೀಗೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಪ್ರತಿದಿನವೂ ಹೀಗೆ ಮಾಡಿದರೆ ಆಗುವ ಅಭೂತಪೂರ್ವ ಬದಲಾವಣೆಯನ್ನು ನೀವು ನೋಡಬಹುದು. ಇದಕ್ಕೆ ನಾನು ಚಾಲೆಂಜ್​ ಮಾಡುತ್ತೇನೆ ಎಂದು ಬರೆದುಕೊಂಡು ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಸೇರ್​​ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಐಸ್ ವಾಟರ್ ಫೇಶಿಯಲ್ ಮಾಡಲು ಒಂದು ಬೌಲ್‌ ನಲ್ಲಿ 10 ಐಸ್ ಕ್ಯೂಬ್‌ ತೆಗೆದುಕೊಂಡು ಬಟ್ಟಲಿಗೆ ಸ್ವಲ್ಪ ನೀರು ಸೇರಿಸಿ ಮತ್ತು ಐಸ್ ತುಂಡುಗಳು ಕರಗಲು ಬಿಡಬೇಕು. ನಂತರ ಅದರಲ್ಲಿ ಮುಖವನ್ನು ಅದ್ದಿ ತೆಗೆದರೆ ಪ್ರಯೋಜನಕಾರಿ ಎನ್ನುವಂತೆ ಅವರ ಈ ವಿಡಿಯೋ ತೋರಿಸುತ್ತದೆ.

ರಾಗಿಣಿ ದ್ವಿವೇದಿ ಅವರ ಬ್ಯೂಟಿ ಸಿಕ್ರೇಟ್​​​ ಕೇಳಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಇದು ನಿಜಾನಾ..? ಸಮಸ್ಯೆ ಇಲ್ವಾ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಐಸ್​ ವಾಟರ್​ ಮುಖಕ್ಕೆ ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕಣ್ಣುಗಳ ಕೆಳಗೆ ಪಫಿನೆಸ್ ಮತ್ತು ಕಪ್ಪು ವಲಯ ನಿವಾರಣೆಗೆ ಐಸ್​ ಕ್ಯೂಬ್​ ಸಹಕಾರಿ ಎನ್ನಲಾಗುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುಗಳು ಊದಿಕೊಂಡಿದ್ದ ಸಂದರ್ಭದಲ್ಲಿ ಕಪ್ಪು ವರ್ತುಲ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಐಸ್ ಫೇಶಿಯಲ್ ಮಾಡಬೇಕು ಎಂದು ಬ್ಯೂಟಿಷಿಯನ್​ ಟಿಪ್ಸ್​ ನೀಡುತ್ತಾರೆ.

ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಕಾಣುತ್ತದೆ ಎನ್ನಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net