ಅತೀ ಉದ್ದದ ಗಡ್ಡದಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ

US woman grabs Guinness World Record for longest beard on a female
Published on

ಅಮೆರಿಕ: ಪುರುಷರಿಗೆ ಗಡ್ಡ ಬರುವುದು ಪ್ರಕೃತಿಯ ನಿಯಮ. ಆದರೆ ಇಂದು ಕಾಲ ಬದಲಾಗಿದೆ ಕೆಲವು ವಿಚಿತ್ರಗಳು ನಮ್ಮ ಸುತ್ತಮುತ್ತಲು ನಡೆಯುತ್ತವೆ. ಹೀಗೆ ಹಾರ್ಮೋನುಗಳ ಅಸಮತೋಲನದಿಂದ ಮಹಿಳೆಯೊಬ್ಬರಿಗೆ ಅತಿ ಉದ್ದದ ಗಡ್ಡ ಬೆಳೆದಿದೆ. ಈ ವಿಚಾರವಾಗಿ ಬೇಸರಗೊಳ್ಳದ ಮಹಿಳೆ ಅತೀ ಉದ್ದದ ಗಡ್ಡದಿಂದಲೇ ಗಿನ್ನೆಸ್‌ ವಿಶ್ವದಾಖಲೆ ಮಾಡಿದ್ದಾರೆ.

ಮೆರಿಕದ ಮಿಚಿಗನ್‌ನ ಎರಿನ್ ಹನಿಕಟ್ ಎನ್ನುವ ಮಹಿಳೆಗೆ ಅತೀ ಉದ್ದದ ಗಡ್ಡ ಬೆಳೆದಿದೆ. ಈ ಮೂಲಕವಾಗಿಯೇ ಗಿನ್ನೆಸ್‌ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. 38 ವರ್ಷದ ಹನಿಕಟ್‌ ಸುಮಾರು ಎರಡು ವರ್ಷಗಳಿಂದ ತಮ್ಮ ಗಡ್ಡವನ್ನು ಬೋಳಿಸಿಲ್ಲ. ಇಂದು ಅವರ ಗಡ್ಡ 11.81 ಇಂಚು ಬೆಳೆದಿದೆ ಎಂದು ಗಿನ್ನೆಸ್‌ ಸಂಸ್ಥೆ ತಿಳಿಸಿದೆ.

ಹನಿಕಟ್ ಕೇವಲ 13 ವರ್ಷದವಳಿದ್ದಾಗ ಪ್ರಾರಂಭವಾಯಿತು. ಆರಂಭದಲ್ಲಿ, ದಿನಕ್ಕೆ ಮೂರು ಬಾರಿ ಶೇವಿಂಗ್, ವ್ಯಾಕ್ಸಿಂಗ್ ಮತ್ತು ಕೂದಲು ತೆಗೆಯುವ ಉತ್ಪನ್ನಗಳನ್ನು ಬಳಸಿ ತನ್ನ ಬೆಳೆಯುತ್ತಿರುವ ಗಡ್ಡದಿಂದ ಮುಕ್ತಿ ಪಡೆಯಲು ಪ್ರಯತ್ನಿಸಿದಳು. ಅಧಿಕ ರಕ್ತದೊತ್ತಡದಿಂದ ಅನಾರೋಗ್ಯಕ್ಕೊಳಗಾಗಿ ದೃಷ್ಟಿಯನ್ನು ಕಳೆದುಕೊಂಡಳು. ನಂತರ, ಅವಳು ಶೇವಿಂಗ್ ಮಾಡುವುದನ್ನು ನಿಲ್ಲಿಸಿ ಗಡ್ಡವನ್ನು ಬೆಳೆಯಲು ಬಿಡುತ್ತಾಳೆ. ಈ ವೇಳೆ ಈಕೆಯ ಪತಿ ಜೆನ್‌, ಗಡ್ಡವನ್ನು ಬೆಳೆಸುವಂತೆ ಪ್ರೋತ್ಸಾಹ ನೀಡಿದ್ದರು ಎಂದು ಗಿನ್ನೆಸ್‌ ಸಂಸ್ಥೆ ತಿಳಿಸಿದೆ.

ನಂತರ 2023 ಫೆಬ್ರವರಿ 8ರಂದು ಎರಿನ್‌ ಹನಿಕಟ್‌ ಅವರ ಗಡ್ಡ 11.81 ಇಂಜು ಇರುವುದರೊಂದಿಗೆ 75 ವರ್ಷದ ವಿವಿಯನ್ ವೀಲರ್ ಅವರ 25.5 cm (10.04 in) ದಾಖಲೆಯನ್ನು ಮುರಿದು ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ.

ಆಕೆಯ ಮುಖದ ಮೇಲಿನ ಅತಿಯಾದ ಕೂದಲಿನ ಬೆಳೆಯಲು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನ ಪರಿಣಾಮವಾಗಿದೆ, ಇದು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಹಾರ್ಮೋನುಗಳ ಅಸಮತೋಲನದಿಂದ ಹನಿಕಟ್ ಗಡ್ಡದ ಬೆಳವಣಿಗೆಯಾಗಿದೆ ಎಂದೂ ಗಿನ್ನೆಸ್‌ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net