

Pranitha| ಸ್ಯಾಂಡಲ್‌ವುಡ್ ಖ್ಯಾತಿಯ ನಟಿ ಪ್ರಣೀತಾ ಸುಭಾಷ್ ಮಗನ ನಾಮಕರಣ ಸಂಭ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ಧೂರಿಯಾಗಿ ನಡೆಯಿತು. ಇನ್ನೂ ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಕ್ವೀನ್ ರಮ್ಯಾ ಕೂಡ ಹಾಜರಾಗಿದ್ದರು. ಇತ್ತೀಚಿಗೆ ಮದುವೆ ಆದ ಡಾಲಿ ಧನಂಜಯ್, ಯೋಗರಾಜ್ ಭಟ್ರು, ಮಾಳವಿಕಾ, ಸಂಯುಕ್ತ ಹೊರನಾಡ್, ಶೃತಿ, ಜಯಮಾಲ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ರು.
ಅಂದ ಹಾಗೆ ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣೀತಾ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗಳಿಗೆ 2 ವರ್ಷವಾಗಿದೆ.
ಸದ್ಯ ಇದೀಗ ಮಗನಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಪ್ರಣೀತಾ ಸುಭಾಷ್ ತಮ್ಮ ಮಗನಿಗೆ ಜೇಯ್ ಕೃಷ್ಣ ನಿತಿನ್ ರಾಜ್ ಅಂತ ಹೆಸರಿಟ್ಟಿದ್ದಾರೆ. ಈ ಮೂಲಕ ಇಲ್ಲಿವರೆಗೂ ಏನು ಹೆಸರು ಅನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.