ಪುಟ್ಟ ಕಂದನ ನಿರೀಕ್ಷೆಯಲ್ಲಿ ನಟಿ ಪರಿಣಿತಿ ಚೋಪ್ರಾ; ಸಂತಸ ಹಂಚಿಕೊಂಡ ದಂಪತಿ | Parineeti Chopra

Untitled design
Published on

Parineeti Chopra : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮೊದಲ ಬಾರಿ ತಾಯಿ ಆಗ್ತಿದ್ದು, ಈ ಖುಷಿ ಸುದ್ದಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್‌ ಆದ್ಮಿ ಸಂಸದ ರಾಘವ್‌ ಚಡ್ಡಾ ಅತ್ಯಂತ ಮುದ್ದಾದ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಚೋಪ್ರಾ ಮತ್ತು ರಾಘವ್ ಚಡ್ಡಾ ಈ ಶುಭ ಸುದ್ದಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ನಾವು ಪಾಲಕರಾಗ್ತಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ದಂಪತಿಗಳು ಇನ್‌ಸ್ಟಾಗ್ರಾಮ್‌ ನಲ್ಲಿ ಜಂಟಿ ಪೋಸ್ಟ್​ನೊಂದಿಗೆ ತಾವು ಮಗುವನ್ನು ನಿರೀಕ್ಷಿಸುತ್ತಿರುವ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಚೋಪ್ರಾ ಈ ಸುದ್ದಿಯನ್ನು ರಿವೀಲ್‌ ಮಾಡುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸೋನಮ್ ಕಪೂರ್, ಭೂಮಿ ಪೆಡ್ನೇಕರ್, ಹುಮಾ ಖುರೇಷಿ ಮತ್ತು ನೇಹಾ ಧೂಪಿಯಾ ಸೇರಿದಂತೆ ಹಲವರು ಶುಭಕೋರಿದ್ದಾರೆ.

ಪರಿಣಿತಿ ಅವರ ಪೋಸ್ಟ್​ಗೆ ಅಭಿಮಾನಿಗಳು ಕೂಡ ಅತ್ಯಂತ ಮುದ್ದಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು, ವಾವ್, ತುಂಬಾ ಚೆನ್ನಾಗಿದೆ ನಿಮ್ಮಿಬ್ಬರಿಗೂ ಮತ್ತು ನಿಮ್ಮ ಕುಟುಂಬಕ್ಕೂ ಅಭಿನಂದನೆಗಳು ಎಂದು ಬರೆದಿದ್ದಾರೆ. ಮತ್ತೊಬ್ಬರು, ಇದಕ್ಕಿಂತ ದೊಡ್ಡ ಆಶೀರ್ವಾದ ಇನ್ನೊಂದಿಲ್ಲ ನಿಮ್ಮನ್ನು ಪ್ರೀತಿಸುತ್ತೇನೆ, ದೇವರು ಯಾವಾಗಲೂ ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ನೀಡಲಿ, ನೀವು ಸಂತೋಷವಾಗಿರಿ ಎಂದು ಬರೆದಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net