

Death: ತಮಿಳುನಾಡಿನ ತಿರುನೆಲ್ವೇಲಿಯ ಪಾಳಯಂಕೋಟ್ಟೈನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನಿಗೆ ಬೆಂಕಿ ಬಳಿಕ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ(ಆಗಸ್ಟ್ 24) ನಡೆದಿದೆ ಎಂದು ವರದಿಯಾಗಿದೆ.
ಪಾಳಯಂಕೋಟ್ಟೈನ 65 ವರ್ಷದ ಪಿ. ಸವೇರಿಯಾ ಎಂಬಾತ ತನ್ನ 57 ವರ್ಷದ ಪತ್ನಿ ಮರ್ಸಿ ಮತ್ತು 27 ವರ್ಷದ ಮಗ ಎಸ್. ಬಿನೋ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಪತ್ನಿ ಮರ್ಸಿ ಮತ್ತು ಮಗ ಬಿನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸವೇರಿಯಾ ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸವೇರಿಯಾ ತನ್ನ ಪತ್ನಿ ಮತ್ತು ಮಗನನ್ನು ಕೊಂದಿದ್ದಾನೆ. ಸವೇರಿಯಾ ತನ್ನ ಪತ್ನಿಯೊಂದಿಗೆ ವಾಗ್ವಾದ ನಡೆಸಿದಾಗ, ಎರಡನೇ ಮಗ ಬಿನೋ ಅದನ್ನು ತಡೆಯಲು ಪ್ರಯತ್ನಿಸಿದ್ದಾನೆ. ಅವನ ತಾಯಿಗೆ ಬೆಂಬಲ ನೀಡಿದ್ದಾನೆ. ಇದರಿಂದ ಕೋಪಗೊಂಡ ಸವೇರಿಯಾ ಅವರನ್ನು ಮಲಗುವ ಕೋಣೆಯಲ್ಲಿ ಬೀಗ ಹಾಕಿ ಕಿಟಕಿಯ ಮೂಲಕ ಕೋಣೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸವೇರಿಯಾ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ವರ್ಷಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದ. ಆತನಿಗೆ ಕುಟುಂಬದಲ್ಲಿ ಆಗಾಗ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಗಳಾಗುತ್ತಿದ್ದವು. ಇತ್ತೀಚೆಗೆ ಆತನ ದೊಡ್ಡ ಮಗನ ವಿವಾಹವಾಗಿದ್ದು, ಇದು ಕುಟುಂಬದಲ್ಲಿ ಗಲಾಟೆಯನ್ನು ಮತ್ತಷ್ಟ ಹೆಚ್ಚಿಸಿದೆ. ಕುಟುಂಬದ ಕಲಹವೇ ಘಟನೆ ಕಾರಣ ಎಂದು ತಿಳಿಸಿದ್ದಾರೆ.
ಮುನೀರ್ಪಳ್ಳಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)