ನನಗೆ ಒಬ್ಬ ಮಗನಿದ್ದಾನೆ... ಆದ್ರೆ ನನಗೆ ಮದುವೆಯಾಗಲು ಇಷ್ಟವಿಲ್ಲ: ನಟಿ ಓವಿಯಾ...Actress oiya helen

Actress Oviya
Published on

 ಮುಂಬೈ:  ನಟ ಯಶ್​​ ಅಭಿನಯದ ಕಿರಾತಕ ಸಿನಿಮಾದಲ್ಲಿ ನಟಿಸಿದ್ದ ಓವಿಯಾ ಹೆಲೆನ್ (Actress oiya helen) ದಕ್ಷಿಣ ಭಾರತದ ಈ ನಟಿ  ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ  ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ನಟಿಗೆ ಮದುವೆ ಆಗಿಲ್ಲ.. ಆದರೆ ನನಗೆ  ಮಗ ಇದ್ದಾರೆ ಆದರೆ ನನಗೆ ಮದುವೆ ಆಗೋಕೆ ಇಷ್ಟವಿಲ್ಲ ಎಂದಿದ್ದಾರೆ.

ಇತ್ತೀಚೆಗೆ ನಟಿ ಓವಿಯಾ ನೀಡಿರುವ ಸಂದರ್ಶನವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಓವಿಯಾಗೆ ಮಗುವಿದೆ ಎಂಬ ಸುದ್ದಿ ಹಬ್ಬುತ್ತಿದೆ. ಈ ಕುರಿತಾಗಿ ನಟಿಯೇ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ದುಬೈನಲ್ಲಿ ನನ್ನ ಮಗನಿದ್ದಾನೆ. ಇದು ನಾಯಿ ಮತ್ತು ಅದನ್ನು ನೋಡಿಕೊಳ್ಳುವುದು ನನ್ನ ನೆಚ್ಚಿನ ವಿಷಯ. ಮದುವೆಯಾಗಿ ಮಗುವನ್ನು ಹೊಂದುವ ಆಸೆ ನನಗಿಲ್ಲ ಎಂದಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಮಲಯಾಳಂ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ತ್ರಿಶೂರ್ ಮೂಲದ ನಟಿ ಓವಿಯಾ ಹೆಲೆನ್. 2007 ರಲ್ಲಿ ಬಿಡುಗಡೆಯಾದ ಪೃಥ್ವಿರಾಜ್ ನಾಯಕತ್ವದ 'ಕಂಗಾರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿದರು. ಇನ್ನು ನಟಿ ಓವಿಯಾ ಕನ್ನಡ ಸ್ಟಾರ್ ನಟ ಯಶ್ ಅರೊಂದಿಗೆ 'ಕಿರಾತಕ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

Oviya

ಬಿಗ್ ಬಾಸ್ ತಮಿಳು ಮೊದಲ ಸೀಸನ್ ಮೂಲಕ ಓವಿಯಾ ಖ್ಯಾತಿ ಪಡೆದರು. ಅನೇಕ ಅಭಿಮಾನಿಗಳನ್ನು ಗಳಿಸಿದರು. ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿ ಆರವ್ ಜೊತೆ ಓವಿಯಾ ಆತ್ಮೀಯರಾಗಿದ್ದರು.  ಓವಿಯಾ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net