ಶೂಟಿಂಗ್​ನಲ್ಲಿ ಜಾರಿಬಿದ್ದ ನಟಿ: ವಿಡಿಯೋ ವೈರಲ್‌

nora
Published on

ಮುಂಬೈ: ಹಾಟ್​ ಬ್ಯೂಟಿ ನೋರಾ ಫತೇಹಿ ಶೂಟಿಂಗ್​ ಸಮಯದಲ್ಲಿ ಜಾರಿಬಿದ್ದಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್‌ ಆಗಿದೆ.

ನಟಿ ಶೂಟಿಂಗ್​ ಸಮಯದಲ್ಲಿ ಸ್ಕೇಟಿಂಗ್​ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ತರಬೇತುದಾರ ಸ್ಕೇಟಿಂಗ್​ ಕಲಿಸುತ್ತಿದ್ದ ಸಮಯದಲ್ಲಿ ವೇಗದಲ್ಲಿ ಹೋಗುತ್ತಿರುವಾಗಲೇ ನಟಿ ಜಾರಿ ಬಿದ್ದಿದ್ದಾರೆ. ಅವರು ಬೀಳುತ್ತಲೇ ಅಲ್ಲಿದ್ದವರೆಲ್ಲರೂ ಓಡಿ ಬಂದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಹೀಗೆ ಜಾರಿ ಬಿದ್ದ ನೋರಾ ಅವರಿಗೆ ಗಾಯವಾಗಿದ್ಯಾ? ಚಿಕಿತ್ಸೆ ಪಡೆದುಕೊಂಡ್ರಾ ಎನ್ನುವ ಕುರಿತಾದ ಯಾವುದೆ ಮಾಹಿತಿ ಇಲ್ಲ. ಆದರೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಭಾರ ಇರುವ ಕಾರಣ ಬ್ಯಾಲೆನ್ಸ್​ ತಪ್ಪುವುದು ಸಹಜ ಎಂದಿದ್ದಾರೆ.

ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ, ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net