ಬೆಂಗಳೂರು: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮಾಡಲಾಗುತ್ತದೆ. ಆದ್ರೆ ನಾವು ಇಂದು ನಿಮಗೆ ನಿಮ್ಮ ಪಾದಗಳನ್ನು ಗೋಡೆಗೆ ಕಾಲು ಚಾಚಿ ಮಲಗಿದ್ರೆ ಸಿಗುವ ಅನೇಕ ಆರೋಗ್ಯ ಪ್ರಯೋಜನಗಳ ಕುರಿತಾಗಿ ಹೇಳುತ್ತಿದ್ದೇವೆ.
ನಿಮ್ಮ ಪಾದಗಳನ್ನು ಗೋಡೆಯ ಮೇಲೆ ಇರಿಸಿ ಮಲಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಈ ಆಸನವನ್ನು ಮಾಡಿ
೧) ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಗೋಡೆಗೆ ಚಾಚಿ ಮಲಗಿದ್ರೆ ಸ್ನಾಯು ನೋವಿನಿಂದ ಅಧಿಕ ರಕ್ತದೊತ್ತಡದವರೆಗಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.
೨) ದುರ್ಬಲ ಜೀರ್ಣಾಂಗ ವ್ಯವಸ್ಥೆಯಿಂದ ಮಲಬದ್ಧತೆ, ಹೊಟ್ಟೆ ನೋವು ಸಮಸ್ಯೆಗಳು ಸಹ ಸಂಭವಿಸಬಹುದು.
೩) ಒತ್ತಡ, ಆತಂಕ ಮತ್ತು ನಿದ್ರಾಹೀನತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
೪) ಗೋಡೆಗೆ ಕಾಲು ಚಾಚಿ ಮಲಗಿದ್ರೆ ಪಾದಗಳು ಮತ್ತು ಪಾದಗಳಲ್ಲಿನ ನೋವನ್ನು ಕಡಿಮೆ ಮಾಡುತ್ತದೆ.
೫) ಕಾಲುಗಳಲ್ಲಿ ಊತ ಮತ್ತು ಜುಮ್ಮೆನಿಸುವಿಕೆ ಕಡಿಮೆ ಮಾಡುತ್ತದೆ.