ಬಯೋಪಿಕ್ ಸಿನಿಮಾದಲ್ಲಿ ನಟಿ ನಿವಿತಾ ಥಾಮಸ್​; ಇದು ಯಾರ ಕಥೆ? ಇಲ್ಲಿದೆ ಮಾಹಿತಿ

WhatsApp Image 2024-05-02 at 3.00.34 PM
Published on

ಆಂಧ್ರಪ್ರದೇಶ: ತೆಲುಗು ನಟಿ ನಿವಿತಾ ಥಾಮಸ್​ ಅವರ ಮುಂಬರುವ ಸಿನಿಮಾದ ಬಗ್ಗೆ ಇದೀಗ ಸಿನಿಪ್ರೇಕ್ಷಕರ ಚಿತ್ತ ಮೂಡಿದ್ದು, ಟಾಲಿವುಡ್​ನ ಹೆಸರಾಂತ ನಿರ್ಮಾಣ ಸಂಸ್ಥೆಯಾದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ. ತಮ್ಮ ಬ್ಯಾನರ್​ನಡಿ ಈ ಬಯೋಪಿಕ್ ಸಿನಿಮಾವನ್ನು ತರುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ನಿವಿತಾರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶ ಮೂಲದ ಬುರ್ರಾ ಕಥಾ ಕಲಾವಿದೆ ಗರಿವಿಡಿ ಪೆದ್ದ ಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಈ ಚಿತ್ರದಲ್ಲಿ ಗರಿವಿಡಿ ಪೆದ್ದ ಲಕ್ಷ್ಮಿ ಅವರ ಪಾತ್ರದಲ್ಲಿ ನಿವಿತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಶೀಘ್ರವೇ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗಿದೆ.

ಈ ಸಿನಿಮಾ ಮೂಲಕ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಕಾಲಿಡಲಿರುವ ನಿರ್ದೇಶಕಿ ಗೌರಿ, ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ನಟಿ ನಿವಿತಾ ಥಾಮಸ್​​ಗೆ ಇದು ಮೊದಲ ಬಯೋಪಿಕ್ ಚಿತ್ರವಾಗಿದ್ದು, ಆಕೆಯ ನಟನೆ ಹೇಗಿರಲಿದೆ? ಸಿನಿಮಾದ ಕಥಾಹಂದರ ಹೇಗೆ ಮೂಡಿಬರಲಿದೆ ಎಂಬ ನಿರೀಕ್ಷೆಗಳು ಸದ್ಯ ಅಭಿಮಾನಿಗಳಲ್ಲಿ ಕಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net