ನೋ ಇಂಟರ್ವಲ್ ನಯನತಾರಾ; ಹೆದರಿಸಲು ಬರುತ್ತಿದ್ದಾರೆ ಲೇಡಿ ಸೂಪರ್​ಸ್ಟಾರ್

Nayanathara
Published on

ಇದೇ ಜೂನ್​ನಲ್ಲಿ ಮದುವೆಯಾದ ನಯನತಾರಾ, ಬಳಿಕ ಅಕ್ಟೋಬರ್​ನಲ್ಲಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದರು. ಆ ನಂತರ ಸಿನಿಮಾಗಳಿಗಿಂತ ಹೆಚ್ಚಾಗಿ ಸರೊಗಸಿ ಸುತ್ತ ಸುತ್ತಿಕೊಂಡಿದ್ದ ವಿವಾದದಿಂದಲೇ ಸುದ್ದಿಯಲ್ಲಿದ್ದರು. ಇಂತಹ ನಯನತಾರಾ ಈಗ ಮತ್ತೆ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾರರ್ ಚಿತ್ರ ‘ಕನೆಕ್ಟ್’ ಮೂಲಕ ಪ್ರೇಕ್ಷಕರನ್ನು ಹೆದರಿಸಲು ಮುಂದಾಗಿದ್ದಾರೆ.

ಇತ್ತೀಚೆಗಷ್ಟೆ 39ನೇ ವರ್ಷಕ್ಕೆ ಕಾಲಿಟ್ಟ ಲೇಡಿ ಸೂಪರ್​ಸ್ಟಾರ್ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಅಶ್ವಿನ್ ಸರವಣನ್ ನಿರ್ದೇಶನದ ಈ ಹಾರರ್ ಚಿತ್ರದ ಪ್ರಸಾರ ಸಮಯ ಕೇವಲ 95 ನಿಮಿಷಗಳಿರುವ ಕಾರಣ, ಮಧ್ಯಂತರವೇ ಇರುವುದಿಲ್ಲ. ಚಿತ್ರದಲ್ಲಿ ನಯನತಾರಾ ಜತೆ ಬಾಲಿವುಡ್ ನಟ ಅನುಪಮ್ ಖೇರ್, ಸತ್ಯರಾಜ್, ವಿನಯ್ ರೈ, ನಫೀಸಾ ಹನಿಯಾ ಪ್ರಮುಖ ತಾರಾಗಣದಲ್ಲಿದ್ದಾರೆ. ‘ಕನೆಕ್ಟ್’ ಇದೇ ಡಿ. 22ರಂದು ಬಿಡುಗಡೆಯಾಗಲಿದೆ.

ಅಂದಹಾಗೆ ಮಧ್ಯಂತರವಿಲ್ಲದೇ ಈ ಹಿಂದೆಯೂ ಕೆಲವು ಚಿತ್ರಗಳು ಬಿಡುಗಡೆಯಾಗಿವೆ. ‘ನ್ಯೂಟನ್’, ‘ರಿಬ್ಬನ್’, ‘ದೋಭಿ ಘಾಟ್’, ‘ಡೆಲ್ಲಿ ಬೆಲ್ಲಿ’, ‘ಒಮರ್ಟಾ’, ‘102 ಮಿನಿಟ್ಸ್’, ‘ಹೋಪ್ ಔರ್ ಹಮ್ ಸೇರಿದಂತೆ ಕೆಲವು ಸಿನಿಮಾಗಳು ಇಂಟರ್ವಲ್ ಇಲ್ಲದೇ ಥಿಯೇಟರ್​ಗಳಲ್ಲಿ ಪ್ರದರ್ಶನಗೊಂಡಿದ್ದವು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net