

ಬೆಂಗಳೂರು: ನವ್ಯಾ ನಾಯರ್ ಇತ್ತೀಚೆಗೆ ತಾಜ್ ಮಹಲ್‌ಗೆ ಭೇಟಿ ಕೊಟ್ಟಿದ್ದರು. ಆ ವೇಳೆ ನವ್ಯಾ ನಾಯರ್ ಅಲ್ಲಿ ಮುದ್ದಾದ ಮಗುವನ್ನು ನೋಡಿ ಎತ್ತಿಕೊಂಡು ಮುದ್ದಾಡಿದ್ದಾರೆ. ಈ ವಿಡಿಯೋವನ್ನ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ತಮಗೆ ಈ ಹಿಂದೆ ಆಗಿರುವ ಅನುಭವವನ್ನು ಹಂಚಿಕಂಡೊಂಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಳ್ಳುವುದರೊಂದಿಗೆ ಈ ಹಿಂದೆ ತಮ್ಮ ಸಂಬಂಧಿಯಿಂದಲೇ ಆದ ಅವಮಾನದಿಂದಾಗಿ ಮಕ್ಕಳ ಪ್ರೀತಿಯಿಂದ ದೂರು ಉಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ.
ಹಿಂದೊಮ್ಮೆ ನವ್ಯಾ ನಾಯರ್ ತಮ್ಮ ಸಂಬಂಧಿಯ ಮಗುವನ್ನು ಎತ್ತಿಕೊಂಡು ಚುಂಬಿಸಿದ್ದರು. ಆ ಮಗುವಿನ ಕೆನ್ನೆ, ಹಣೆ ಮುತ್ತನ್ನು ನೀಡಿದ ಬಳಿಕ ತಾಯಿ ಕೋಪಗೊಂಡು, ಅಪರಿಚಿತರೊಂದಿಗೆ ಈ ರೀತಿ ಕಿಸ್ ಮಾಡಬೇಡ ಎಂದು ಹೇಳಿದ್ದರು. ಆ ವೇಳೆ ಅವರ ಕಣ್ಣುಗಳು ಒದ್ದೆಯಾಗಿದ್ದವು. ಒಂದೇ ಒಂದು ಮಾತು ಆಡದೆಯೂ ಅಲ್ಲಿಂದ ಹೊರಟು ಬಂದಿದ್ದೇನು. ಆ ಘಟನೆ ಬಳಿಕ ಆ ಮಗುವಿನ ತಾಯಿಯಿಂದ ಕೇಳಬಾರದ ಮಾತುಗಳನ್ನೆಲ್ಲ ಕೇಳಿದ್ದೇನು. ಅಲ್ಲಿಂದ ಮಕ್ಕಳ ಹತ್ತಿರ ಹೋಗುವುದನ್ನೇ ನಿಲ್ಲಿಸಿದ್ದೇನು. ಈ ಘಟನೆ ಹೃದಯಕ್ಕೆ ನೋವುಂಟು ಮಾಡಿತ್ತು. ಇಂತಹ ಕೆಟ್ಟ ಅನುಭವದ ಬಳಿಕ ಮಕ್ಕಳೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಈ ವಿಡಿಯೋಗೆ ನವ್ಯಾ ನಾಯರ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರ ವಿಡಿಯೋ ನೋಡಿದ ಬಳಿಕ ತಮ್ಮ ಅನುಭವಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಮಲಯಾಳಂ ನಟಿ ಕನ್ನಡಿಗರಿಗೂ ಚಿರಪರಿಚಿತ. ದರ್ಶನ್ ನಟಿಸಿದ ಸೂಪರ್ ಹಿಟ್ ಸಿನಿಮಾ 'ಗಜ', ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ದೃಶ್ಯಂ' ಸೀರಿಸ್‌ಗಳಲ್ಲಿ ನಟಿಸಿದ್ದಾರೆ.