ಹೊಸ ಹೇರ್ ಸ್ಟೈಲ್​​ನಲ್ಲಿ ‘ರಣಧೀರ’ ಚಿತ್ರದ ನಟಿ ಖುಷ್ಬೂ; ಫೋಟೋ ವೈರಲ್

kushbu
Published on

ಚೆನ್ನೈ: ಬಹುಭಾಷಾ ನಟಿ ವೈಯಕ್ತಿಕ ಮತ್ತು ಚಲನಚಿತ್ರ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಖುಷ್ಬೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸದಾ ಸೀರೆ ಉಟ್ಟು, ಹಣೆಯಲ್ಲಿ ಬೊಟ್ಟು, ಸಿಂಧೂರ ಧರಿಸಿ ಸಾಂಪ್ರದಾಯಿಕವಾಗಿ ಕಾಣುವ ಖುಷ್ಬೂ ಇದ್ದಕ್ಕಿದ್ದಂತೆ ಮಾಡರ್ನ್ ಆಗಿ ಬದಲಾಗಿದ್ದಾರೆ. 'ಬದಲಾವಣೆ ಅನಿವಾರ್ಯ.. ನ್ಯೂ ಲುಕ್, ನ್ಯೂಸ್ಟೈಲ್..' ಎಂಬ ಶೀರ್ಷಿಕೆಯೊಂದಿಗೆ ಹೊಸ ಹೇರ್ ಸ್ಟೈಲ್‌ನಲ್ಲಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳಲ್ಲಿ ಖುಷ್ಬೂ ತೂಕ ಇಳಿಸಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ಸೆಲೆಬ್ರಿಟಿಗಳ ಜೊತೆಗೆ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ಖುಷ್ಬೂ ಅವರನ್ನು ಹೊಗಳುತ್ತಿದ್ದಾರೆ. ನಟಿ ತ್ರಿಶಾ "ಓ ಮೈ" ಎಂದು ನಗುತ್ತಿರುವ ಎಮೋಜಿಯನ್ನು, ನಟಿ ಮಾಳವಿಕಾ ಸೂಪರ್ ಕ್ಲಾಸಿ ಎಂದು ಕಾಮೆಂಟ್ ಮಾಡಿದ್ದಾರೆ.

'ನೀವು ಯಾರಿಂದ ಸ್ಫೂರ್ತಿ ಪಡೆದಿದ್ದೀರಿ? ನಿಮ್ಮ ಉದ್ದನೆಯ ಕೂದಲು ಸುಂದರವಾಗಿತ್ತು, ನೀನಿರುವಂತೆಯೇ ಸುಂದರವಾಗಿದ್ದೀರಿ ಎಂದು ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿರಿಯ ಚಲನಚಿತ್ರ ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರ ಪರಿಚಯದ ಅಗತ್ಯವಿಲ್ಲ. ಸೌತ್ ಚಿತ್ರರಂಗದಲ್ಲಿ ಮಿಂಚಿದ ಹಿರಿಯ ನಾಯಕಿ ಖುಷ್ಬೂ. 80-90ರ ದಶಕದಲ್ಲಿ ಹುಡುಗರ ಕನಸಿನ ರಾಣಿ. ಟಾಪ್ ಹೀರೋಗಳ ಜತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಟಾಪ್ ಹೀರೋಯಿನ್. ಸದ್ಯ ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಖುಷ್ಬೂ ಸಕ್ರಿಯವಾಗಿರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net