ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಮೃತ ದೇಹ ಪತ್ತೆ

mys
Published on

ಮೈಸೂರು: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾದ ಘಟನೆ  ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ನಡೆದಿದೆ.

ಮನೆಯೊಂದರಲ್ಲಿ ಒಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ, ಉಳಿದ ಮೂರು ಶವಗಳ ಮನೆಯಲ್ಲಿ ಪತ್ತೆಯಾಗಿದೆ. ಮೃತರು ಗಂಡ ಹೆಂಡತಿ ಇಬ್ಬರು ಹೆಣ್ಣು ಮಕ್ಕಳಾಗಿದ್ದಾರೆ.

ಮಹದೇವಸ್ವಾಮಿ(48), ಅನಿತಾ (35), ಪುತ್ರಿಯರಾದ ಚಂದ್ರಕಲಾ(17), ಧನಲಕ್ಷ್ಮೀ(15) ಮೃತರು. ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಚಿಕ್ಕ ಮಗಳು ಕೊಠಡಿಯಲ್ಲಿ ಮತ್ತು ಮಹದೇವ ಸ್ವಾಮಿ ಶವ ಹಾಲ್‌ನಲ್ಲಿ ಪತ್ತೆಯಾಗಿದೆ. ಮೃತ ಮಹದೇವಸ್ವಾಮಿ ಆರ್‌ಎಂಸಿಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net