ಶೈನಿಂಗ್‌ ಯೆಲ್ಲೋ ಬಣ್ಣದ ಸ್ಯಾರಿಯಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್​, ಫೋಟೋಸ್​​ ವೈರಲ್​..!

ಕಕಕ
Published on

ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ನಟಿ ಕೀರ್ತಿ ಸುರೇಶ್. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಕೀರ್ತಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಕೀರ್ತಿ ಸುರೇಶ್ ಇತ್ತೀಚೆಗೆ ತೆಲುಗು ಚಿತ್ರ ದಸರಾದಲ್ಲಿ ನಟಿಸಿದ್ದಾರೆ.


ಸದ್ಯ ನಟಿ ಕೀರ್ತಿ ಸುರೇಶ್​​ ಯೆಲ್ಲೋ ಸ್ಯಾರಿಯಲ್ಲಿ ಮಿಂಚುತ್ತಿರುವ ಫೋಟೋಸ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿವೆ.


ಕೀರ್ತಿ ಸುರೇಶ್ ಮತ್ತು ಅವರ ಮದುವೆಯ ಬಗ್ಗೆ ಕೆಲವು ವದಂತಿಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಸದ್ಯದಲ್ಲೇ ಮದುವೆ ನಡೆಯಲಿದ್ದು, ದುಬೈನ ಉದ್ಯಮಿಯೊಬ್ಬರ ಜೊತೆ ಸಂಬಂಧ ಸೆಟ್ಟೇರಲಿದೆ ಎಂಬ ವರದಿಗಳು ಬಂದಿದ್ದವು. ಆದರೆ ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರು ಸುದ್ದಿ ನಿರಾಕರಿಸಿದ್ದರು.


ಸದ್ಯ ಕೀರ್ತಿ ಯೆಲ್ಲೋ ಸ್ಯಾರಿಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸುತ್ತಿದ್ದು, ಈ ಫೋಟೋಸ್​​​​​​ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಮಹಾನಟಿ ಚಿತ್ರಕ್ಕಾಗಿ ಅವರು ಅತ್ಯುತ್ತಮ ರಾಷ್ಟ್ರೀಯ ನಟಿ ಪ್ರಶಸ್ತಿಯನ್ನು ಕೀರ್ತಿ ಸುರೇಶ್​​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net