ಸಿನಿಮಾದಲ್ಲಿ ಅವಕಾಶಬೇಕಾದ್ರೆ ಮಲಗಬೇಕು, ಅದು ನನಗೆ ಕೆಟ್ಟ ಅನುಭವವಾಗಿತ್ತು ಎಂದು ಕಣ್ಣೀರಿಟ್ಟ ನಟಿ

kasthurishankar
Published on

ಹೈದ್ರಾಬಾದ್​​: ಸೀರಿಯಲ್​​ ನಟಿ ಕಸ್ತೂರಿ ಶಂಕರ್ ಕಾಸ್ಟಿಂಗ್ ಕೌಚ್ ಕುರಿತು ಮಾಡಿರುವ ಕಾಮೆಂಟ್‌ಗಳು ಸಂಚಲನ ಮೂಡಿಸುತ್ತಿವೆ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಕಸ್ತೂರಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಸ್ತೂರಿ ಶಂಕರ್ ಮಾತನಾಡಿ, ನನಗೆ ಹಲವು ಕಾಸ್ಟಿಂಗ್ ಕೌಚ್ ಅನುಭವಗಳಾಗಿವೆ. ಇವುಗಳ ಬಗ್ಗೆ ಈ ಹಿಂದೆಯೂ ಮಾತನಾಡಿದ್ದೇನೆ. ಒಪ್ಪದೆ ಇದ್ದಾಗ ಸಿನಿಮಾದಿಂದ ತೆಗೆದು ಹಾಕಿದ್ದಾರೆ. ನಾನು ಇರುವ ಸಂಚಿಕೆಗಳನ್ನು ಕಟ್​ ಮಾಡಿದ್ದಾರೆ. ಆದರೆ ತೆಲುಗಿನಲ್ಲಿ ಅಂತಹ ಅನುಭವವಾಗಿಲ್ಲ ಎಂದಿದ್ದಾರೆ.

ಮಲಯಾಳಂನಲ್ಲಿ ಕೆಟ್ಟ ಅನುಭವವಾಗಿದೆ. ಮಲಯಾಳಂ ಇಂಡಸ್ಟ್ರಿ ಈಗ ಚೆನ್ನಾಗಿದೆ. ಕೆಲವು ವಿಚಾರಕ್ಕೆ ಅದಕ್ಕೆ ಒಪ್ಪದೆ ತೆಗೆದು ಹಾಕಿದರು. ಅಷ್ಟೊತ್ತಿಗಾಗಲೇ ನನಗೆ ಮದುವೆಯಾಗಿತ್ತು. ಈ ರೀತಿಯ ಅನುಭವಗಳು ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳಿಗೆ ಎದುರಾಗುತ್ತವೆ. ಲೈಂಗಿಕ ಕಿರುಕುಳ ಎಲ್ಲೆಡೆ ಇದೆ. ಆದರೆ ಎಲ್ಲರೂ ಹಾಗೆ ಇರಲ್ಲ ಎಂದಿದ್ದಾರೆ.

ಲಂಚ ತೆಗೆದುಕೊಳ್ಳುವವರೂ, ತೆಗೆದುಕೊಳ್ಳದೆ ಇರುವವರು ಇದ್ದಾರೆ. ಚಿತ್ರರಂಗದಲ್ಲೂ ಎರಡು ರೀತಿಯ ಜನರಿದ್ದಾರೆ. ನನಗೆ ಲೈಂಗಿಕ ಕಿರುಕುಳ ನೀಡಲಾಯಿತು. ಅದಕ್ಕೇ ನಾನು ಇಂಡಸ್ಟ್ರಿ ಬಿಡೋದಿಲ್ಲ. 80 ಸಿನಿಮಾ ಮಾಡಿದ್ದೇನೆ. ಎಲ್ಲರೂ ಕೆಟ್ಟವರಾದರೆ ನಾನೇನೂ ಮಾಡಲಾರೆ. ಈಗಲೂ ನನಗೆ ಅವಕಾಶಗಳು ಸಿಗುತ್ತಿವೆ.ಹಾಗಾಗಿ ಚಿತ್ರರಂಗವನ್ನು ದೂಷಿಸುವಂತಿಲ್ಲ. ನಮಗೆ ಎದುರಾಗುವ ಅನುಭವಗಳನ್ನು ಹೇಗೆ ಎದುರಿಸುತ್ತೇವೆ ಎಂಬುದು ಮುಖ್ಯ ಎಂದರು. ಈಕೆಯ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net