ಓಪೆನ್‌ಹೈಮರ್‌ ಚಿತ್ರದಲ್ಲಿ ಭಗವದ್ಗೀತೆ ಉಲ್ಲೇಖದ ಬಗ್ಗೆ ನಟಿ ಕಂಗನಾ ಮೆಚ್ಚುಗೆ; ಟ್ರೋಲ್​ ಮಾಡಿದ ನೆಟ್ಟಿಗರು

Untitled design - 2023-07-31T194715.617
Published on

ಮುಂಬೈ: ಹಾಲಿವುಡ್​ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ನಿರ್ದೇಶನದಲ್ಲಿ ಮೂಡಿಬಂದ 'ಓಪನ್​ಹೈಮರ್'​ ಚಿತ್ರ ಇದೀಗ ಯಶಸ್ವಿಯಾಗಿದ್ದು, ವಿದೇಶಗಳಲ್ಲಿ ಸೇರಿದಂತೆ ಭಾರತದಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ಮತ್ತು ಲಾಭವನ್ನು ಗಳಿಸಿದೆ. ಸದ್ಯ ಈ ಚಿತ್ರದ ಕುರಿತು ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೀಗ ಮತ್ತೊಮ್ಮೆ ಟ್ರೋಲ್ ಆಗುವ ಮುಖೇನ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಚಿತ್ರದ ಬಗ್ಗೆ ತಾವು ಮಾತನಾಡಿದ ವಿಡಿಯೋ ಹಂಚಿಕೊಳ್ಳುವ ಮೂಲಕ ಬರೆದಿರುವ ಅವರು, "ಇಲ್ಲಿಯವರೆಗಿನ ಕ್ರಿಸ್ಟೋಫರ್ ನೋಲನ್ ಅವರ ಕೆಲಸಗಳಲ್ಲಿ ಇದು ಅತ್ಯುತ್ತಮ. ನಮ್ಮ ಯುಗಕ್ಕೆ ಅತ್ಯಂತ ಮುಖ್ಯವಾದ ಚಿತ್ರವಿದು. ಸಿನಿಮಾ ವೀಕ್ಷಿಸುವಾಗ ನಾನು ತುಂಬಾ ಕುತೂಹಲಗೊಂಡಿದ್ದೆ, ಎಲ್ಲಿಯೂ ಅಂತ್ಯಗೊಳಿಸಲು ಬಯಸಲಿಲ್ಲ. ನಾನು ರಾಜಕೀಯ ಮತ್ತು ಭೌತಶಾಸ್ತ್ರದ ಬಗ್ಗೆ ಹೆಚ್ಚು ಒಲವು ಹೊಂದಿದ್ದೇನೆ. ಇದು ಮೀರಿದ ಅದ್ಭುತ" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ವಿಡಿಯೋದಲ್ಲಿ ಓಪೆನ್‌ಹೈಮರ್‌ ಸಿನಿಮಾದ ಬಗ್ಗೆ ಮಾತನಾಡುವಾಗ ಚಿತ್ರದಲ್ಲಿ ಭಗವದ್ಗೀತೆ ಉಲ್ಲೇಖ ನನ್ನ ನೆಚ್ಚಿನ ಭಾಗ ಎಂದು ಹೇಳಿದ್ದಾರೆ. ಇದನ್ನು ಟ್ರೋಲ್​ ಮಾಡಿ ನಟಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಕಾಮೆಂಟ್​ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net