ಮದುವೆಗೆ ಕರೆಯಲು ಹೋದ ಹರ್ಷಿಕಾ ಪೂಣಚ್ಚಗೆ ಚಿನ್ನ ಗಿಫ್ಟ್​ ಕೊಟ್ಟ ಹಿರಿಯ ನಟಿ

harshikapoonacha (1)
Published on

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಭುವನ್‌ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಿಸುತ್ತಿದ್ದಾರೆ. ಹೀಗೆ ಲಗ್ನ ಪತ್ರಿಕೆ ನೀಡಲು ಹೋದ ವೇಳೆ ಹಿರಿಯ ನಟಿಯೊಬ್ಬರು ಹರ್ಷಿಕಾ ಪೂಣಚ್ಚ ಅವರಿಗೆ ಬಂಗಾರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹಿರಿಯ ನಟಿ ಜಯಾಮಾಲಾ ಮನೆಗೆ ಹೋಗಿ ಮದ್ವೆ ಆಮಂತ್ರಣ ಪತ್ರಿಕೆ ನೀಡಿದ್ದು, ಈ ವೇಳೆ ನವಜೋಡಿಗೆ ಜಯಮಾಲಾ ಸರ್‌ಪ್ರೈಸ್​​ ನೀಡಿದ್ದಾರೆ. ಹರ್ಷಿಕಾ ಪೂಣಚ್ಚಗೆ ಚಿನ್ನದ ಓಲೆ ಗಿಫ್ಟ್ ನೀಡಿ ಜಯಮಾಲಾ ಆಶೀರ್ವದಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹರ್ಷಿಕಾಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಜಯಮಾಲ ಸಂಭ್ರಮಿಸಿದ್ದು, ಈ ವೇಳೆ ಜತೆಗೆ ಭುವನ್ ಪೊನ್ನಣ್ಣ ಜಯಮಾಲಾ ಪುತ್ರಿ ಸೌಂದರ್ಯಾ ಜಯಮಾಲಾ ಜತೆಗಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಹರ್ಷಿಕಾ ಮತ್ತು ಭುವನ್ ಪರಸ್ಪರ ವಿವಾಹವಾಗುತ್ತಿದ್ದು ಇದೇ ತಿಂಗಳ 24 ಹಾಗೂ 25ರಂದು ಈ ಯುವಜೋಡಿಯ ವಿವಾಹ ಸಮಾರಂಭ ಕೊಡಗಿನಲ್ಲಿ ಅದ್ಧೂರಿಯಾಗಿ ಜೊತೆಗೆ ಕೊಡವ ಸಂಪ್ರದಾಯದಂತೆ ನಡೆಯಲಿದೆ. ಸ್ಯಾಂಡಲ್‌ವುಡ್‌ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net