3 ಕೋಟಿ ರೂ. ಮೌಲ್ಯದ ದ್ವೀಪವನ್ನೇ ಖರೀದಿಸಿದ ಹಾಟ್‌ ನಟಿ Jacqueline Fernandez

jacqueline
Published on

ಮುಂಬೈ: ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡಿಸ್ ( Jacqueline Fernandez ) ಖ್ಯಾತಿ, ಹಣ ಮತ್ತು ಐಷಾರಾಮಿ ಜೀವನ ಕೋಟಿ ಬ್ಯಾಂಕ್ ಬ್ಯಾಲೆನ್ಸ್,  ದುಬಾರಿ ಕಾರು, ಬೃಹತ್ ಪ್ಲಾಟ್ ಇತ್ಯಾದಿಗಳನ್ನು  ಹೊಂದಿರುವ ನಟಿ ಇದೀಗ  ಒಂದು ದ್ವೀಪವನ್ನು ಖರೀದಿಸಿದದ್ದಾಳೆ.

ಜಾಹೀರಾತು, ವ್ಯಾಪಾರ, ಸಿನಿಮಾಗಳ ಮೂಲಕ ಕೋಟಿಗಟ್ಟಲೆ ಗಳಿಸುವ ನಾಯಕಿಯರು ಅದೇ ರೇಂಜ್ ನಲ್ಲಿ ಕೋಟಿಗಟ್ಟಲೆ ಖರ್ಚು ಮಾಡೋದು ಹೊಸದೇನಲ್ಲ. ಗಳಿಸಿದ ಹಣವನ್ನು ಎಲ್ಲರೂ ಹೀಗೆಯೇ ಖರ್ಚು ಮಾಡುತ್ತಾರೆ. ಅನೇಕರು ಈಗಾಗಲೇ ಭಾರತ ಮತ್ತು ವಿದೇಶಗಳಲ್ಲಿ ಐಷಾರಾಮಿ ಕಾರುಗಳು ಮತ್ತು ಬಂಗಲೆಗಳನ್ನು ಖರೀದಿಸಿದ್ದಾರೆ. ಈಗ ಬಾಲಿವುಡ್ ನಟಿಯೊಬ್ಬರು  ಶ್ರೀಲಂಕಾದಲ್ಲಿ ದ್ವೀಪವನ್ನು ಹೊಂದಿದ್ದಾರೆ.

ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಕತ್ರಿನಾ ಮತ್ತು ಆಲಿಯಾ ಬಟ್ ಅಂದುಕೊಂಡಂತೆ ಆಕೆ ಅಲ್ಲ. ಹಾಲಿವುಡ್‌ನಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿದ ಪ್ರಿಯಾಂಕಾ ಚೋಪ್ರಾ ಕೂಡ ಅಲ್ಲ. ಆಕೆ ಬೇರೆ ಯಾರೂ ಅಲ್ಲ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್.

ಜಾಕ್ವೆಲಿನ್ ಒಂದು ದ್ವೀಪವನ್ನು ಹೊಂದಿದ್ದಾಳೆ. ಜಾಕ್ವೆಲಿನ್ ಫರ್ನಾಂಡೀಸ್ ಅವರ ತಂದೆ ಶ್ರೀಲಂಕಾದವರು ಮತ್ತು ತಾಯಿ ಮಲೇಷಿಯನ್. 2012ರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್  3.5 ಕೋಟಿ ರೂ. ಮೌಲ್ಯದ ಖಾಸಗಿ ದ್ವೀಪವನ್ನು ಖರೀದಿಸಿದ್ದಾರಂತೆ. ಈ ನಾಲ್ಕು ಎಕರೆ ದ್ವೀಪವು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿದೆ.

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ಖಾಸಗಿ ದ್ವೀಪದ ಬಳಿ ಇದೆ. ಇಲ್ಲೊಂದು ವಿಲ್ಲಾ ಕಟ್ಟಬೇಕೆಂಬುದು ಜಾಕ್ವೆಲಿನ್ ಕನಸಾಗಿತ್ತು. ಮುಂಬೈನಲ್ಲಿ ಜಾಕ್ವೆಲಿನ್‌ಗೆ 5 ಬಿಎಚ್‌ಕೆ ಅಪಾರ್ಟ್‌ಮೆಂಟ್ ಕೂಡ ಇದೆ ಎನ್ನಲಾಗಿದೆ.

ಜಾಕ್ವೆಲಿನ್ ಫರ್ನಾಂಡೀಸ್ 2009 ರಲ್ಲಿ ಅಲ್ಲಾದೀನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಹೌಸ್‌ಫುಲ್, ಮರ್ಡರ್ 2, ಕಿಕ್, ರೇಸ್ 2 ಸೇರಿದಂತೆ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net