

ಮುಂಬೈ: ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್, ಮಾದಕ ಉಡುಗೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವುದರ ಜೊತೆಗೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಡ್ರೆಸ್ ಕಾರಣದಿಂದಲೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಾಹ್ನವಿ ಅವರು ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜಾಹ್ನವಿ, ಟ್ಯಾಂಕ್ ಟಾಪ್ ಮತ್ತು ಬಿಗಿಯಾದ ಜಿಮ್ ಡ್ರೆಸ್ ಧರಿಸಿದ್ದಾರೆ. ಅಲ್ಲದೆ, ಬರಿದಾದ ಕಾಲಿಗೆ ಪ್ಯಾಡ್ಸ್ ಮತ್ತು ಕೈಗೆ ಗ್ಲೌಸ್ ಹಾಕಿಕೊಂಡು ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಜಾಹ್ನವಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ಗೆ ಜಾಹ್ನವಿ ಅವರನ್ನು ಕಳುಹಿಸಬೇಕು ಎಂದು ನೆಟ್ಟಿಗನೊಬ್ಬ ಕಮೆಂಟಿಸಿದರೆ, ಸರಿಯಾದ ಕ್ರಿಕೆಟ್ ರಕ್ಷಣಾ ಸಾಧನಗಳನ್ನು ಧರಿಸಿದೇ ಅಭ್ಯಾಸ ಮಾಡುತ್ತಿದ್ದಾರೆ ಎಂದು ಇನ್ನೊಬ್ಬ ನೆಟ್ಟಿಗ ಟೀಕಿಸಿದ್ದಾರೆ. ಇನ್ನೊಬ್ಬ ಈ ಅವತಾರವನ್ನು ಲೆಗ್ ಅಂಪೈರ್ ನೋಡಿದ್ರೆ ಗತಿ ಏನು ಎಂದು ಮಗದೊಬ್ಬ ನೆಟ್ಟಿಗ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಅದು ಏನೇ ಇರಲಿ ಸದ್ಯಕ್ಕಂತೂ ಜಾಹ್ನವಿ ಅವರ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮ್ಮ ಮುಂದಿನ "ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ" ಚಿತ್ರಕ್ಕಾಗಿ ಜಾಹ್ನವಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ. (ಏಜೆನ್ಸೀಸ್)