ಕಲ್ಕಿ 2898 AD ಸೀಕ್ವೆಲ್‌ನಿಂದ ಹೊರನಡೆದ ನಟಿ ದೀಪಿಕಾ ಪಡುಕೋಣೆ!|Deepika Padukone

untitled-design-2025-09-18t140245351-68cbc3cbf3e3a
Published on

Deepika Padukone: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರದಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮುಂದಿನ ಭಾಗಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಂತಹ ಸಂದರ್ಭದಲ್ಲಿ, ಕಲ್ಕಿ 2898 AD ಚಿತ್ರದ ನಿರ್ಮಾಪಕ ದೀಪಿಕಾ ಅವರು ಮುಂದಿನ ಭಾಗದಲ್ಲಿ ನಟಿಸುತ್ತಿಲ್ಲ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಘೋಷಿಸಿದ್ದಾರೆ.

ನಿರ್ಮಾಪಕರು ಹೇಳಿದ್ದೇನು?

Kalki2898AD ನ ಮುಂಬರುವ ಸೀಕ್ವೆಲ್ ನಲ್ಲಿ ನಟಿ ದೀಪಿಕಾ ಪಡುಕೋಣೆಯವರು ನಟಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸುತ್ತಿದ್ದೇನೆ. ಇನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ನಾವು ಬೇರೆಯಾಗಲು ನಿರ್ಧರಿಸಿದ್ದೇವೆ. ಈ ಮೊದಲ ಚಿತ್ರ ಮಾಡುವ ದೀರ್ಘ ಪ್ರಯಾಣದಲ್ಲಿಯೂ ನಮಗೆ ಪಾಲುದಾರಿಕೆ ಸಿಗಲಿಲ್ಲ" ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

@ Kalki2898AD ನಂತಹ ಚಿತ್ರವು ಬದ್ಧತೆಗಳಿಗೆ ಅರ್ಹವಾಗಿದೆ. ಅವರ ಭವಿಷ್ಯದ ಯೋಜನೆಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದು ನಿರ್ಮಾಪಕರು ತಮ್ಮ ಅಧಿಕೃತ X(ಎಕ್ಸ್)​ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಕಲ್ಕಿ 2 ನಲ್ಲಿ ನಟಿಸುತ್ತಿಲ್ಲ!

ಡಿಸೆಂಬರ್​ನಲ್ಲಿ ದೀಪಿಕಾ ತನ್ನ ಮಗುವಿಗೆ ಜನ್ಮ ನೀಡಿದ ನಂತರ ದಂಪತಿ ತನ್ನ ಮಗಳಾದ ದುವಾಳನ್ನು ಪರಿಚಯಿಯಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ, ಮಾಧ್ಯಮ ವೃತ್ತಿಪರರು ದೀಪಿಕಾ ಅವರನ್ನು ಕಲ್ಕಿ 2 ಚಿತ್ರದಲ್ಲಿ ನಟಿಸುವುದರ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ನಟಿ ಪ್ರಸ್ತುತ ಆದ್ಯತೆ ದುವಾಳಿಗೆ ಮಾತ್ರ. ಶೀಘ್ರದಲ್ಲೇ ಕೆಲಸವನ್ನು ಪ್ರಾರಂಭಿಸಲು ಆತುರತೆ ಇಲ್ಲ ಎಂದು ತಿಳಿಸಿದ್ದರು.

ನಾನು ಕೆಲಸದಲ್ಲಿರುವಾಗ ನನ್ನ ಮಗಳನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ. ನನ್ನ ತಾಯಿ ನನ್ನನ್ನು ಯಾವ ರೀತಿಯಲ್ಲಿ ಬೆಳೆಸಿದರು ಅದೇ ರೀತಿಯಲ್ಲಿ ನಾನು ನನ್ನ ಮಗಳನ್ನು ಬೆಳೆಸುತ್ತೇನೆ ಎಂದು ತಿಳಿಸಿದ್ದರು.

ನೆಟ್ಟಿಗರ ಪ್ರತಿಕ್ರಿಯೆ

ದೀಪಿಕಾ ಅವರು ಚಿತ್ರದಿಂದ ಹೊರನಡೆದಿದ್ದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ಅವರ ತಲೆಯ ತೂಕ ಎಷ್ಟಿದೆ ಎಂಬುದನ್ನು ಅನೇಕ ನಿರ್ಮಾಪಕರು ನಿರ್ದೆಶಕರು ಸಾಬೀತು ಪಡಿಸಿದ್ದಾರೆ. ಪ್ರತಿ ಇಂಡಸ್ಟ್ರಿಯಲ್ಲೂ ಅವರನ್ನು ಬಹಿಷ್ಕರಿಸಬೇಕು ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

"ಒಬ್ಬ ನಟಿ ಒಂದು ಸಿನಿಮಾಗೆ ತನ್ನನ್ನು ಸಂಪೂರ್ಣವಾಗಿ ನೀಡಲು ಸಾಧ್ಯವಾಗದಿದ್ದಾಗ ಅವರನ್ನು ಸಿನಿಮಾದಿಂದ ತೆಗೆದು ಹಾಕುವುದು ಒಳ್ಳೆಯ ನಿರ್ಧಾರ" ಎಂದು ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net