ಪ್ರಿಯಕರನ ವಂಚನೆಯನ್ನು ಫೇಸ್‌ಬುಕ್‌ನಲ್ಲೂ ತೋಡಿಕೊಂಡಿದ್ದ ನಟಿ ಚಂದನಾ

Chandana1 June 20
Published on

ಬೆಂಗಳೂರು: ಪ್ರಿಯಕರನಿಂದ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್‌ವುಡ್ ನಟಿ ಚಂದನಾ ತನ್ನ ವ್ಯಥೆಯನ್ನು ಸಂಬಂಧಿಕರು, ಸ್ನೇಹಿತರ ಬಳಿ ಮಾತ್ರವಲ್ಲದೆ, ಫೇಸ್‌ಬುಕ್‌ನಲ್ಲೂ ತೋಡಿಕೊಂಡಿದ್ದ ಸಂಗತಿ ಬಯಲಾಗಿದೆ.

ತಮ್ಮ ಫೇಸ್‌ಬುಕ್ ಅಕೌಂಟ್‌ಗೆ ಅವರು ‘ಸಾಯಿ ಚಂದು’ ಎಂದು ಹೆಸರಿಟ್ಟುಕೊಂಡಿದ್ದಾರೆ. ಪ್ರಿಯಕರ ದಿನೇಶ್ ಜತೆಗಿರುವ ಹಲವಾರು ಫೋಟೋಗಳನ್ನು ಅದರಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ, ಡಿಸ್‌ಪ್ಲೇ ಪಿಕ್ಚರ್ ಕೂಡ ಆತನ ಜತೆ ಆಪ್ತವಾಗಿ, ಆತ್ಮೀಯತೆಯಿಂದ ನಿಂತಿರುವಂಥದ್ದೇ ಇದೆ.

ಆತನ ಜತೆಗಿರುವ ಒಂದು ಫೋಟೋ ಕೆಳಗೆ ಅವರ ನೂರಾರು ಪರಿಚಿತರು ‘ಆವ್‌ಸಮ್, ಬ್ಯೂಟಿಫುಲ್ ಪೇರ್, ಮೇಡ್ ಫಾರ್ ಈಚ್ ಅದರ್, ನೈಸ್ ಪಿಕ್ಚರ್’ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಅದಕ್ಕೆಲ್ಲ ಚಂದನಾ ಧನ್ಯವಾದಗಳನ್ನು ಹೇಳಿದ್ದಾರೆ.

ಆದರೆ ಇತ್ತೀಚೆಗೆ ಅಂದರೆ ನಾಲ್ಕು ದಿನಗಳ ಮುಂಚಿನ ಒಂದು ಕಾಮೆಂಟ್‌ನಲ್ಲಿ ಒಬ್ಬರು ‘ಯಾವಾಗ ಊಟ ಹಾಕ್ಸೋದು’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಚಂದನಾ ‘ಯಾಕೆ ಬಾವಾ, ಈ ಪ್ರಶ್ನೆ’ ಎಂದು ಮರುಪ್ರಶ್ನಿಸುತ್ತಾರೆ. ಅವರು ‘ಮ್ಯಾರೇಜ್ ಊಟ...’ ಎನ್ನುತ್ತಾರೆ. ಅದಕ್ಕೆ ಚಂದನಾ ‘ಪ್ರಾಬ್ಲಂ ಗೊತ್ತಿದ್ದೂ ಈ ಪ್ರಶ್ನೆ ಕೇಳ್ತೀರಾ’ ಎಂದಿದ್ದಾರೆ. ‘ಪರಿಹಾರ ಆಗಿಲ್ವಾ?’ ಎಂದು ಆ ವ್ಯಕ್ತಿ ಕೇಳುತ್ತಾರೆ. ‘ಇಲ್ಲ’ ಎಂದಷ್ಟೇ ಚಂದನಾ ಚುಟುಕಾಗಿ ಉತ್ತರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net