ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!

Dinesh 1 June 20
Published on

ಬೆಂಗಳೂರು: ಪ್ರಿಯಕರ ಮಾಡಿದ ವಂಚನೆಯಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್‌ವುಡ್ ನಟಿ ಚಂದನಾ, ಆತನ ಹೆಸರನ್ನು ವಾಟ್ಸ್‌ಆ್ಯಪ್‌ನಲ್ಲಿ ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದಳು!

ಪ್ರಿಯಕರ ದಿನೇಶ್‌ಗೆ ಐದು ಲಕ್ಷ ರೂ. ಕೊಟ್ಟಿದ್ದ ಚಂದನಾ, ಆತ ಮದುವೆಯಾಗುವುದಿಲ್ಲ ಎಂಬುದು ಖಚಿತವಾದ ಬಳಿಕ ಆ ಹಣವನ್ನು ವಾಪಸ್ ಕೇಳಿದ್ದು, ಆತ ‘ಆಗ ಕೊಡುತ್ತೇನೆ, ಈಗ ಕೊಡುತ್ತೇನೆ’ ಎಂದು ಸತಾಯಿಸಿದ್ದು ಎಲ್ಲವೂ ಅವರಿಬ್ಬರ ವಾಟ್ಸ್‌ಆ್ಯಪ್ ಮೆಸೇಜ್‌ಗಳಿಂದ ದೃಢಪಟ್ಟಿದೆ. ಆ ಸಂಭಾಷಣೆಯ ಪೂರ್ಣ ರೂಪ ಇಲ್ಲಿದೆ.

(ಒಂದು ಸ್ಕ್ರೀನ್‌ಶಾಟ್)
ದಿನೇಶ್: ಈಗಾಗಲೇ 25 ಸಾವಿರ ನಿಮ್ಮ ಹತ್ರಾನೆ ಇದೇಪಾ
ಚಂದನಾ: ಎಷ್ಟು ಬೇಕು
ದಿನೇಶ್: ಐದು ಲಕ್ಷ ಬೇಕು
ಚಂದನಾ: ತಮಾಷೆ ಮಾಡ್ತಿದೀರಾ 5 ಲಕ್ಷ
ದಿನೇಶ್: ಅದರಲ್ಲಿ 3 ಲಕ್ಷ ರಿಟರ್ನ್ ಬರುತ್ತೆ; ನಮ್ ಮದ್ವೆ ಟೈಮ್‌ಗೆ
ಚಂದನಾ: ಮನೇಲಿ ನಿಮಗೆ ಬೈದ್ರಾ ಹೇಳಿ; 2 ಲಕ್ಷ ಕೊಡ್ತೀನಿ
ದಿನೇಶ್: ನಿನ್ ವಿಷಯದ ಬಗ್ಗೆ ಏನೂ ಕೇಳಿಲ್ಲ ಇನ್ನೂ
ಚಂದನಾ: ಸೀರಿಯಸ್‌ಲಿ?
ದಿನೇಶ್: ಹ್ಞೂ
ಚಂದನಾ: ಕೇಳಿದರೆ ಏನ್ ಹೇಳ್ತೀರಾ?
ದಿನೇಶ್: ಏನ್ ಹೇಳ್ತಾರೆ ನೋಡೋಣ ತಡಿ

(ಇನ್ನೊಂದು ಸ್ಕ್ರೀನ್‌ಶಾಟ್)
ಚಂದನಾ: ಊರಲ್ಲಿ ನೆಟ್‌ವರ್ಕ್ ಸಿಗ್ತಿದೆಯಾ?
ದಿನೇಶ್: ಸ್ವಲ್ಪಸ್ವಲ್ಪ
ಚಂದನಾ: ಏನಾದ್ರೂ ಬೈದ್ರಾ (ಮನೇಲಿ)?
ದಿನೇಶ್: ನನ್ ಮೇಲೆ ಪ್ರೀತಿ ಇದ್ರೆ... ನಾನು ನಿನಗೆ ಏನೋ ಹೇಳ್ತೀನಿ...
ಚಂದನಾ: ಹೇಳಿ
ದಿನೇಶ್: ಪ್ರಾಮಿಸ್ ಮಾಡು
ಚಂದನಾ: ನಿಮ್ಮುನ್ನ ಬಿಡು ಅಂತ ಅನ್ನೋದು ಬಿಟ್ಟು ಬೇರೆ ಏನು ಬೇಕಾದರೂ ಹೇಳಿ ಮಾಡ್ತೀನಿ. ಪ್ರಾಮಿಸ್.
ದಿನೇಶ್: ನನ್ನ ಬರ್ತ್‌ಡೇಗೆ ಏನೂ ಗಿಫ್ಟ್ ಬೇಡ. ಅದೇ ಹಣವನ್ನು ನನಗೆ ಕೊಡು ಪ್ಲೀಸ್
ಚಂದನಾ: ಯಾಕೆ?
ದಿನೇಶ್: ಬೇಕು.
ಚಂದನಾ: ಯಾಕೆ ಅಂತ ಹೇಳಿ
ದಿನೇಶ್: ಮನೆ ರೆಡಿ ಮಾಡಿಸಬೇಕು, ಮತ್ತೆ ಅಣ್ಣನ ಮದುವೆಗೆ ದುಡ್ಡು ಬೇಕು.
ಚಂದನಾ: ಐಫೋನ್ ಬೇಡ್ವಾ?
ದಿನೇಶ್: ಐಫೋನ್, ಚೈನ್, ಸೂಟ್ ಏನೂ ಬೇಡ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net