ಯುವಜನರಿಗೆ ಅರ್ಪಣಾ ಮಾದರಿ

ckm aprana
ಜಿಲ್ಲಾ ಕನ್ನಡಸೇನೆ ಮುಖಂಡರು ಚಿಕ್ಕಮಗಳೂರಿನ ದೇವೇಗೌಡ ವೃತ್ತದ ಸಮೀಪ ಅಪರ್ಣಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಪಿ.ಸಿ.ರಾಜೇಗೌಡ, ಜಯಪ್ರಕಾಶ್, ಸಿ.ಟಿ.ಯೋಗೀಶ್, ವಿಜಯ್‌ಕುಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ನಟಿ ಹಾಗೂ ನಿರೂಪಕಿ ಅರ್ಪಣಾ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸೇನೆ ಮುಖಂಡರು ಶನಿವಾರ ನಗರದ ದೇವೇಗೌಡ ವೃತ್ತದ ಸಮೀಪ ಅಪರ್ಣಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಸರ್ಕಾರಿ ಅಥವಾ ರಾಜಕೀಯ ಕಾರ್ಯಕ್ರಮಗಳಲ್ಲಿ ಅಚ್ಚ ಕನ್ನಡದಲ್ಲಿ ನಿರೂಪಿಸಿ ಜನರ ಮನಸ್ಸಿನಲ್ಲಿ ನೆಲೆಸಿದ ಅರ್ಪಣಾ ಕನ್ನಡತನ ಮೆರೆದಿರುವುದು ಸುಲಭದ ಮಾತಲ್ಲ. ಸಿನಿಮಾ ಕ್ಷೇತ್ರದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಹೆಗ್ಗಳಿಕೆ ಪಡೆದಿದ್ದಾರೆ ಎಂದರು.
ರಾಜ್ಯದ ಹಲವು ಕಡೆಗಳ ರೈಲ್ವೇ, ಮೆಟ್ರೋ, ಬಸ್‌ನಿಲ್ದಾಣಗಳ ದೈನಂದಿನ ಆಗು-ಹೋಗುಗಳ ಸಂದೇಶವನ್ನು ಕನ್ನಡದಲ್ಲಿ ಧ್ವನಿಕೊಟ್ಟವರು ಅರ್ಪಣಾ. ಭಾಷೆಯ ಬೆಳವಣಿಗೆಯ ಕಂಪನ್ನು ಎಲ್ಲೆಡೆ ಪಸರಿಸಲು ಸಾಹಿತ್ಯ ಕ್ಷೇತ್ರದ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಾಡು, ನುಡಿಯ ಗೌರವ ಹೆಚ್ಚಿಸುತ್ತಿದ್ದರು ಎಂದು ಹೇಳಿದರು.
ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಉಪಾಧ್ಯಕ್ಷ ಸಿ.ಟಿ.ಯೋಗೀಶ್, ವಿಜಯ್‌ಕುಮಾರ್, ವಕ್ತಾರ ಅನ್ವರ್, ಕಾರ್ಯದರ್ಶಿ ಸತೀಶ್, ನಗರ ಪ್ರಧಾನ ಕಾರ್ಯದರ್ಶಿ ವಿನಯ್, ಸಹ ಪ್ರಧಾನ ಕಾರ್ಯದರ್ಶಿ ಹರಿಶಂಕರ್, ಸಂಘಟನಾ ಕಾರ್ಯದರ್ಶಿ ಬಿ.ಸತೀಶ್, ಆಟೋ ಚಾಲಕರಾದ ಚೇತನ್, ಪಾಲಾಕ್ಷಿ, ಪ್ರಸನ್ನ, ಜಮೀರ್, ಮಂಜುಳಾ, ಚೈತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net