

ಹೈದರಾಬಾದ್: ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್(Casting Couch) ಇಲ್ಲ, ಇನ್ನು ಕಮಿಟ್‌ಮೆಂಟ್ ಎಂಬುದು ಸುಳ್ಳು ಎಂದು ಅನನ್ಯ ನಾಗಲ್ಲ ಕಡಕ್ ಉತ್ತರ ನೀಡಿದ್ದಾರೆ.
ಆಕೆ ನಟಿಸಿರುವ ಚಿತ್ರ ಪೊಟ್ಟೇಲ್ ದೀಪಾವಳಿಗೆ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಸ್ಟಿಂಗ್ ಕೌಚ್ ಕುರಿತು ನಟಿ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.
ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಪ್ರಶ್ನೆಗಳನ್ನು ಕೇಳಿದಾಗ, ನಟಿ ಅನನ್ಯಾ ಕೂಡ ಅದೇ ದಾಟಿಯಲ್ಲಿ ಉತ್ತರ ನೀಡಿದರು. ತೆಲುಗು ಹುಡುಗಿಯರು ಇಂಡಸ್ಟ್ರಿಗೆ ಬರಲು ಹೆದರುತ್ತಾರೆ. ಇಂಡಸ್ಟ್ರಿಯಲ್ಲಿ ಅವಕಾಶ ಕೊಡಲು ಕಮಿಟ್‌ಮೆಂಟ್ ಕೇಳುತ್ತಾರೆ ಎಂಬ ಮಾತಿದೆ, ಎಂದು ಮಹಿಳಾ ಪತ್ರಕರ್ತೆ ಅನನ್ಯ ನಾಗಲ್ಲ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅನನ್ಯಾ ಇದು ತಪ್ಪು ಎಂದು ಉತ್ತರಿಸಿದರು.
ಸಿನಿಮಾಗೆ ನೀವು ಮಾಡಿಕೊಳ್ಳುವ ಅಗ್ರಿಮೆಂಟ್‌ನಲ್ಲಿ ಕಮಿಟ್‌ಮೆಂಟ್ ಸೇರಿರುತ್ತದೆಯಂತೆ ಹೌದಾ? ಇದು 100ಕ್ಕೆ 100 ಸತ್ಯ. ನಿಮಗೆ ಇಂತಹ ಅನುಭವವಾಗಿದೆಯಾ ಎಂದು ಇನ್ನೊಂದು ಪ್ರಶ್ನೆ ಕೇಳಲಾಯಿತು. ಆಗ ಅನನ್ಯ ಅಷ್ಟೇ ಖಡಕ್ ಆಗಿ ಶೇ.100 ಸತ್ಯ ಎಂದು ನಿಮಗೆ ಹೇಗೆ ಗೊತ್ತು ಎಂದು ಮರುಪ್ರಶ್ನಿಸಿದರು.
ನಮ್ಮ ಸ್ನೇಹಿತರು ಹೇಳಿದ್ದು, ಎಂದು ಪ್ರಶ್ನಿಸಿದ ಪತ್ರಕರ್ತೆ ಹೇಳಿದಾಗ, ಟಾಲಿವುಡ್‌ನಲ್ಲಿ ಅವಕಾಶ ಬರುವ ಮುನ್ನ ಕಮಿಟ್‌ಮೆಂಟ್ ಇಲ್ಲ, ಪಾಸಿಟಿವ್ ಮತ್ತು ನೆಗೆಟಿವ್ ಎಲ್ಲಿ ಇಲ್ಲ ಹೇಳಿ? ಅನುಭವವಿಲ್ಲದೆ ಹೇಗೆ ಇಂತಹ ಪ್ರಶ್ನೆ ಕೇಳುತ್ತೀರಿ ಎಂದು ಅನನ್ಯಾ ಉತ್ತರಿಸಿದರು. ಮೇಲಾಗಿ ನಾನು ನಟಿಯಾಗಿ ಹೇಳುತ್ತಿದ್ದೇನೆ, ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಮಿಟ್ ಮೆಂಟ್ ಆಧಾರದ ಮೇಲೆ ಸಂಭಾವನೆ ಇದೆ ಎಂಬ ಮಾತು ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿದೆಯಲ್ಲಾ ಎಂದು ಪತ್ರಕರ್ತೆ ಮತ್ತೆ ಕೇಳಿದಾಗ, ಅನನ್ಯಾ, ನೀವು ಕೇಳಿದ್ದನ್ನೇ ಕೇಳುತ್ತಿದ್ದೀರಿ. ನಾನು ಈ ಕ್ಷೇತ್ರದಲ್ಲಿದ್ದೇನೆ. ನನ್ನ ಪ್ರಕಾರ ನೀವು ಅಂದುಕೊಂಡಂತೆ ಇಲ್ಲಿ ಇಲ್ಲ ಎಂದು ಅನನ್ಯಾ ದೃಢವಾಗಿ ಉತ್ತರಿಸಿದರು.
ಅಲ್ಲಿ ಅನನ್ಯಾ ಅವರ ಉತ್ತರಗಳನ್ನು ಕೇಳಿದ ಅನೇಕರು ಅನನ್ಯಾಳ ಧೈರ್ಯ ಮತ್ತು ಆಕೆ ಮಾತನಾಡುವ ರೀತಿಯನ್ನು ಮೆಚ್ಚಿದ್ದಲ್ಲದೆ, ಚಪ್ಪಾಳೆಯಿಂದ ಶ್ಲಾಘಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.