

ಮುಂಬೈ: ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ 2012 ರಲ್ಲಿ ಬಿಡುಗಡೆಯಾದ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು, ವೃತ್ತಿ ಬದುಕಿನಲ್ಲಿ ಹಲವು ಏರಿಳಿತಗಳನ್ನು ಎದುರಿಸಿದಳು. ಸದ್ಯ ಸ್ಟಾರ್ ಹೀರೋಯಿನ್ ಆಗಿ ಮುಂದುವರಿದಿರುವ ಈ ಚೆಲುವೆ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕುಟುಂಬದ ಹಿನ್ನೆಲೆಯಿದ್ದರೂ ಆರಂಭದಲ್ಲಿ ತಾನು ಎದುರಿಸಿದ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾಳೆ.
ಇದನ್ನೂ ಓದಿ: ಹೋಟೆಲ್ಬಳಿ ಮಲವಿಸರ್ಜನೆ..ಭಾರತೀಯನಿಗೆ 25 ಸಾವಿರ ದಂಡ!
ನನಾಗ ದುಂಡುಮುಖಿಯಾಗಿದ್ದೆ. ನನ್ನ ಸೌಂದರ್ಯದ ಬಗ್ಗೆ ನಾನು ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಚಿತ್ರರಂಗಕ್ಕೆ ಬಂದ ನಂತರ ನಾನು ಸಾಕಷ್ಟು ಬದಲಾಗಬೇಕಾಗಿತ್ತು. ನನ್ನ ದೇಹದ ಆಕಾರದಿಂದಾಗಿಯೇ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ತೂಕ ಸ್ವಲ್ಪ ಹೆಚ್ಚಿದ್ದರಿಂದ ಅದನ್ನು ಕಳೆದುಕೊಳ್ಳಲು ನಾನು ಶ್ರಮಿಸಿದೆ. ಆದರೆ ನಾನು ಗರ್ಭಿಣಿಯಾಗಿದ್ದಾಗ ದೇಹ ದಂಡನೆಗೆ ಮುಂದಾಗಲಿಲ್ಲ, ನನಗೆ ಇಷ್ಟವಾದ ಆಹಾರ ಸೇವಿಸಿದೆ ಎಂದು ಹೇಳಿದ್ದಾರೆ.
ರೇಖಾ, ಐಶ್ವರ್ಯ ರೈ ಮತ್ತು ಶಾರುಖ್ ಖಾನ್ ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ರೇಖಾ ಅವರನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅವರು ತಮ್ಮ ಸೌಂದರ್ಯದಿಂದ ಎಲ್ಲರನ್ನೂ ಮೆಚ್ಚಿಸುತ್ತಿದ್ದಾರೆ. ನೃತ್ಯದ ವಿಷಯದಲ್ಲಿ ನಾನು ಯಾವಾಗಲೂ ಐಶ್ವರ್ಯಾ ಅವರಿಂದ ಸ್ಫೂರ್ತಿ ಪಡೆಯುತ್ತೇನೆ. ಅವರು ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಾರೆ. ಯಾವುದೇ ಚಿತ್ರಕ್ಕೆ ನೃತ್ಯ ಮಾಡುವ ಮೊದಲು.. ಯೂಟ್ಯೂಬ್‌ನಲ್ಲಿ ಐಶ್ ಹಾಡುಗಳನ್ನು ನೋಡಿ, ನಂತರ ಸೆಟ್‌ಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಆಲಿಯಾ ನಟಿಸಿರುವ ಕರಣ್ ಜೋಹರ್ ನಿರ್ಮಾಣದ ಜಿಹ್ರಾ ಅ.11ರಂದು ಬಿಡುಗಡೆಯಾಗಲಿದೆ.