

ರೇಣುಕಾಸ್ವಾಮಿ ಕೊಲೆ ಕೇಸ್ ಬೆಂಗಳೂರಿನ 59ನೇ CCH ಕೋರ್ಟ್ನಲ್ಲಿ ಸಾಕ್ಷಿಗಳ ವಿಚಾರಣೆ
ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ ಪಾರ್ಟಿಯಲ್ಲಿದ್ದ ಚಿಕ್ಕಣ್ಣ ಪ್ರಕರಣದ CW80 ಸಾಕ್ಷಿ
ಘಟನೆ ದಿನ ಎಲ್ಲಿದ್ದರು ಎನ್ನುವ ಬಗ್ಗೆ ಹೇಳಿಕೆ ನೀಡುವಾಗ ಗಾಬರಿಯಾದ ನಟ ಚಿಕ್ಕಣ್ಣ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಪ್ರದೋಷ್ ಮಾಫಿ ಸಾಕ್ಷಿ ಆದ ನಂತರ ಪ್ರಕರಣಕ್ಕೆ ಸಾಕಷ್ಟು ತಿರುವು ಸಿಕ್ಕಿದೆ. ಇದರ ಭಾಗವಾಗಿ, ಪ್ರಕರಣದ ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಇಂದು 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜಾರಾಗಿದ್ದರು. ಘಟನೆ ನಡೆದ ದಿನ ದರ್ಶನ್ ಜೊತೆಗೆ ಪಾರ್ಟಿಯಲ್ಲಿದ್ದ ಕಾರಣ ಇಬ್ಬರನ್ನು ಸಾಕ್ಷಿಗಳಾಗಿ ಪರಿಗಣಿಸಿದ್ದು, ಕೋರ್ಟ್ಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು.
59ನೇ CCH ಕೋರ್ಟ್ನಲ್ಲಿ ಜಡ್ಜ್ ಮುಂದೆ CW80 ಸಾಕ್ಷಿ ನಟ ಚಿಕ್ಕಣ್ಣ ಹಾಜಾರಾದರು. ಘಟನೆ ಬಗ್ಗೆ ಸಾಕ್ಷಿ ಹೇಳುವಾಗ ತೀರಾ ನರ್ವಸ್ ಆಗಿ ತಡಬಡಾಯಿಸಿದ್ದಾರೆ. ಅವರು ಮಾತನಾಡಲು ಕಷ್ಟ ಪಡುತ್ತಿರುವುದು, ಆತಂಕಕ್ಕೊಳಗಾಗಿರುವುದನ್ನು ಕಂಡ ನ್ಯಾಯಮೂರ್ತಿಗಳು, 'ಯಾಕೆ ಸಹಜವಾಗಿ ಮಾತನಾಡುತ್ತಿಲ್ಲ. ಗಾಬರಿಯಾಗ್ತಿದ್ದೀರಿ' ಎಂದು ಪ್ರಶ್ನೆ ಮಾಡಿದರು.
ಆಗ ತಮಗೆ 'ನರ್ವಸ್ ಮತ್ತು ಟೆನ್ಶನ್' ಆಗುತ್ತಿರುವ ಬಗ್ಗೆ ನಟ ಚಿಕ್ಕಣ್ಣ ಹೇಳಿದರು. ಹೀಗಾಗಿ ನೀರು ಕುಡಿಯಲು, ಹತ್ತು ನಿಮಿಷ ರಿಲಾಕ್ಸ್ ಆಗಲು ಸಮಯ ಕೊಟ್ಟರು ಎನ್ನಲಾಗಿದೆ. ಈ ವೇಳೆ ವಕೀಲರು ಸಹ ನೀವೇನು ಕ್ರೈಮ್ ಮಾಡಿಲ್ಲ ಗಾಬರಿಯಾಗ್ಬೇಡಿ ಎಂದು ಧೈರ್ಯ ತುಂಬಿದರು ಎನ್ನಲಾಗಿದೆ. ಪವಿತ್ರಾ ಗೌಡ, ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದಗಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆನಂತರ ಮಾತನಾಡಿದ ಚಿಕ್ಕಣ್ಣ ತಮಗೂ ಮತ್ತು ದರ್ಶನ್ ಅವರಿಗೆ ಇರುವ ನಂಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 201ರಲ್ಲಿ ರಿಲೀಸ್ ಆಗಿದ್ದ ಚಿಂಗಾರಿ ಸಿನಿಮಾದಿಂದ ಹಿಡಿದು, ಚಕ್ರವರ್ತಿ, ಒಡೆಯ ಹಾಗೂ ಗರಡಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಬಗ್ಗೆ ಚಿಕ್ಕಣ್ಣ ಮಾತನಾಡಿದರು. ಘಟನೆ ನಡೆದ ದಿನ ಸ್ಟೋನಿ ಬ್ರೂಕ್ನಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಸಿನಿಮಾ ಬಗ್ಗೆ ಮಾತನಾಡಿಕೊಂಡಿದ್ದೆವು. ಊಟ ಮಾಡಿದ ಬಳಿಕ ನಾವು ಅಲ್ಲಿಂದ ಹೊರಟು ಹೋದೆವು ಎಂದು ಯಶಸ್ ಸೂರ್ಯ ಸ್ಪಷ್ಟಪಡಿಸಿದರು.
ಚಿಕ್ಕಣ್ಣ ನರ್ವಸ್ ಆದ ನಂತರ ಇಬ್ಬರಿಗೂ ಅವಕಾಶ ನೀಡಲಾಯಿತು. ನಂತರ ಯಶಸ್ ಸೂರ್ಯ ಅವರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಅದೇ ಸಮಯದಲ್ಲಿ ಎಸ್ಪಿಪಿ ಯಶಸ್ ಕ್ರಾಸ್ ಎಕ್ಸಾಮಿನೇಷನ್ಗೆ ಅನುಮತಿ ಕೋರಿದ್ದು ಕೋರ್ಟ್ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
15 ನಿಮಿಷಗಳ ವಿಶ್ರಾಂತಿ ಬಳಿಕವೂ ಮಾತನಾಡಲು ಸಾಧ್ಯವಾಗುತ್ತಿಲ್ಲ.ಟೆನ್ಶನ್ ಆಗ್ತಿದೆ ಎಂದು ಚಿಕ್ಕಣ್ಣ ಪ್ರತಿಕ್ರಿಯಿಸಿದ ಹಿನ್ನೆಲೆ ಚಿಕ್ಕಣ್ಣ ಸಾಕ್ಷ್ಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ನಾಳೆ ಅಂದರೆ,ಅ.14ರಂದು ಯಶಸ್ ಸೂರ್ಯ ಅವರ ಕ್ರಾಸ್ ಎಕ್ಸಾಮಿನೇಷನ್, ಚಿಕ್ಕಣ್ಣ ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಲಾಗಿದೆ, (ಏಜೆನ್ಸೀಸ್).