ನಟ ದರ್ಶನ್​ಗೆ ತಪ್ಪದ ಸಂಕಷ್ಟ : ಮಾಫಿ ಸಾಕ್ಷಿ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​| Actor Darshan

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಶ್​ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ಪ್ರಮುಖ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ
Published on: 

ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಶ್​ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ಪ್ರಮುಖ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಗುರುವಾರ(ಅ. 08) ವಿಜಯಲಕ್ಷ್ಮಿ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪರ್ದಿವಾಲ ನೇತೃತ್ವದ ಪೀಠ, ಮಾಫಿ ಸಾಕ್ಷಿ ಯಾರಗಬೇಕು ಎಂದು ನಿರ್ಧರಿಸುವ ಹಕ್ಕು ಆರೋಪಿಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಕೊಲೆ ಪ್ರಕರಣದ ಎ14 ಆರೋಪಿ ಪ್ರದೋಶ್ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಎಚ್ ನ್ಯಾಯಾಲಯ ಇಂದು (ಆಗಸ್ಟ್​ 25) ಅಂಗೀಕರಿಸಿದೆ. ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಕೆಲವು ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿ ಅನುಮೋದನೆ ನೀಡಿದ್ದಾರೆ.

Also Read
11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಖ್ಯಾತ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು | Nisha Raphael
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

ಪ್ರದೋಶ್​ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪ್ರತಿಯೊಂದು ಸತ್ಯಾಂಶವನ್ನು ಯಾವುದೇ ಮುಚ್ಚುಮರೆಯಿಲ್ಲದೆ ನ್ಯಾಯಾಲಯದ ಮುಂದೆ ಬಾಯಿಬಿಡಬೇಕು. ಅಲ್ಲದೆ, ವಿಚಾರಣೆಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಕಡ್ಡಾಯವಾಗಿ ಜೈಲುವಾಸ ಅನುಭವಿಸಬೇಕಾಗುತ್ತದೆ. ಒಂದು ವೇಳೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿದರೆ ಅಥವಾ ತಪ್ಪು ಮಾಹಿತಿ ಒದಗಿಸಿದರೆ, ಆತನನ್ನು ಮತ್ತೆ ನೇರವಾಗಿ ಆರೋಪಿಯನ್ನಾಗಿಯೇ ಪರಿಗಣಿಸಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹಾಗೂ ಪ್ರಾಸಿಕ್ಯೂಷನ್ ಅಗತ್ಯ ತೀರ್ಮಾನ ಕೈಗೊಳ್ಳಲಿದೆ ಎಂದು ಕೋರ್ಟ್​ ಹೇಳಿದೆ.

ಪ್ರದೋಶ್ ಮಾಫಿ ಸಾಕ್ಷಿ​ ಅರ್ಜಿಯಲ್ಲಿ ಏನಿದೆ?

ಪ್ರದೋಶ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಪ್ರಕಾರ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ, ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಬಂಧಿಸಿ, ಹಲ್ಲೆ ನಡೆಸಲಾಯಿತು. ಈ ವೇಳೆ ರೇಣುಕಾಸ್ವಾಮಿಯ ತಲೆಯಿಂದ ರಕ್ತಸುರಿಯುತ್ತಿತ್ತು ಎಂದು ಪ್ರದೋಶ್ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಕೂಡ ಸ್ಥಳಕ್ಕೆ ಬಂದಿದ್ದಳು ಹಾಗೂ ತನ್ನ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಳು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ನಟನಾ ಮಾಂತ್ರಿಕ ನಾನಾ ಪಾಟೇಕರ್ ಇನ್ನಿಲ್ಲ: ಹಿರಿಯ ನಟನ ಅಭಿನಯವನ್ನು ನೋಡಲೇಬೇಕಾದ 7 ಸಿನಿಮಾಗಳಿವು..!| Nana Patekar
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

ಇದಿಷ್ಟೇ ಅಲ್ಲದೆ, ಇತರೆ ಆರೋಪಿಗಳು ರೇಣುಕಾಸ್ವಾಮಿಯ ಒಳಉಡುಪನ್ನು ಕೆಳಗಿಳಿಸಿ, ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು. ನಂದೀಶ್, ಪವನ್ ಮತ್ತು ನಾಗರಾಜ್ ಅವರು ಮರದ ತುಂಡುಗಳು ಹಾಗೂ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದು, ನಂದೀಶ್ ಅವರು ರೇಣುಕಾಸ್ವಾಮಿಯನ್ನು ಟಾಟಾ ಏಸ್ ವಾಹನಕ್ಕೆ ನೇಣುಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ಇತರೆ ಆರೋಪಿಗಳು ಮರದ ತುಂಡುಗಳಿಂದ ನಿರಂತರವಾಗಿ ಹೊಡೆದಿದ್ದಾರೆ ಎಂದು ಪ್ರದೋಶ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಗುಪ್ತಾಂಗಗಳಿಗೆ ಪದೇಪದೆ ಒದ್ದ ದರ್ಶನ್

ಪ್ರದೋಶ್​ ತನ್ನ ಅರ್ಜಿಯಲ್ಲಿ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಸಂತ್ರಸ್ತನ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಜೋರಾಗಿ ಓದುತ್ತಿದ್ದ ಸಮಯದಲ್ಲಿ ದರ್ಶನ್ ಅವರೇ ನೈಲಾನ್ ಹಗ್ಗವನ್ನು ತೆಗೆದುಕೊಂಡು ರೇಣುಕಾಸ್ವಾಮಿ ಅವರ ಕೈ ಹಾಗೂ ಬೆನ್ನಿನ ಮೇಲೆ ಹಲವು ಬಾರಿ ಹೊಡೆದಿದ್ದಾರೆ. ಮತ್ತೊಂದು ಹಂತದಲ್ಲಿ ರೇಣುಕಾಸ್ವಾಮಿಯನ್ನು ಸಂಪೂರ್ಣವಾಗಿ ನಗ್ನಗೊಳಿಸಿ, ದರ್ಶನ್ ಅವರೇ ಆತನ ಗುಪ್ತಾಂಗಗಳಿಗೆ ಪದೇಪದೆ ಒದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ರೀತಿಯ ಸತತ ಹಲ್ಲೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಾನು ಒಂದಕ್ಕಿಂತ ಹೆಚ್ಚು ಬಾರಿ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿರುವುದಾಗಿ ಪ್ರದೋಶ್ ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತನಿಗೆ ತಿನ್ನಲು ಆಹಾರ ಮತ್ತು ನೀರು ನೀಡಿದ ಬಳಿಕವೂ ದರ್ಶನ್ ರೇಣುಕಾಸ್ವಾಮಿ ಅವರ ಕತ್ತು ಹಾಗೂ ಎದೆಗೆ ಒದ್ದಿದ್ದರಿಂದ ಆತ ಕುಸಿದುಬಿದ್ದಿದ್ದಾನೆ. ಅಷ್ಟೇ ಅಲ್ಲದೆ, ದರ್ಶನ್ ತಮ್ಮ ಎರಡೂ ಕಾಲುಗಳನ್ನು ಸಂತ್ರಸ್ತನ ಎದೆಯ ಮೇಲೆ ಇರಿಸಿ ತುಳಿದರು, ಬಳಿಕ ನಾನು ಮತ್ತೆ ಮಧ್ಯಪ್ರವೇಶಿಸಿ ಅವರನ್ನು ದೂರ ಕರೆದುಕೊಂಡು ಹೋದೆ ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net