

ತಿರುವನಂತಪುರಂ: 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೇರಳದ ಖ್ಯಾತ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ನಿಶಾ ರಾಫೆಲ್ ವಿರುದ್ಧ ತ್ರಿಶೂರ್ ಪಶ್ಚಿಮ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಲಿಪಶು ಬಾಲಕನನ್ನು ವೈದ್ಯಕೀಯ-ಕಾನೂನು ಪರೀಕ್ಷೆಗಾಗಿ ತ್ರಿಶೂರ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ತಪಾಸಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಔಪಚಾರಿಕ ದೂರಿನ ಆಧಾರದ ಮೇರೆಗೆ ನಿಶಾ ರಾಫೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.
ಆದಾಗ್ಯೂ, ನಿಶಾ ಅವರ ಆಪ್ತ ಮೂಲಗಳು ಪ್ರಕರಣವನ್ನು ಕಟ್ಟು ಕಥೆ ಎಂದು ತಳ್ಳಿ ಹಾಕಿದ್ದಾರೆ. ಎರಡು ಫ್ಲಾಟ್‌ಗಳ ಕುರಿತು ನಡೆಯುತ್ತಿರುವ ವಿವಾದದಿಂದಾಗಿ ನಿಶಾ ಮತ್ತು ದೂರುದಾರರ ನಡುವೆ ಮೊದಲೇ ದ್ವೇಷವಿತ್ತು. ಈ ಹಿನ್ನೆಲ ಈ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).