Actor Vishal ಹೀಗಾಗೋಕೆ ಆ ನಿರ್ದೇಶಕ ಕಾರಣ! ಸ್ಫೋಟಕ ಆರೋಪ

Vishal
Published on

Actor Vishal : ತಮಿಳು ನಟ ವಿಶಾಲ್ ಅವರ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ  ಮಾತಾಡಲು ಮೈಕ್​ ಹಿಡಿದ ನಟ ವಿಶಾಲ್​ ಕೈ ನಡುಗುತ್ತಿತ್ತು.  ಅವರನ್ನು ನೋಡಿದ ಅಭಿಮಾನಿಗಳು ಬಿಚ್ಚಿಬಿದ್ದಿದ್ದಾರೆ. ಆದರೆ ಈ ಸುದ್ದಿ ಬೆನ್ನಲ್ಲೇ ಇದೀಗ  ನಟನ ಈ ಸ್ಥಿತಿಗೆ ನಿರ್ದೇಶಕನೆ ಕಾರಣ ಎನ್ನುವ ಆರೋಪವೊಂದು ಕೇಳಿ ಬರುತ್ತಿದೆ.

ನಟ ವಿಶಾಲ್ ಇಂದಿನ ಸ್ಥಿತಿಗೆ ನಿರ್ದೇಶಕ ಬಾಲಾ ಕಾರಣ ಎಂದು ಒಬ್ಬ ಹಿರಿಯ ಪತ್ರಕರ್ತರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ನಿರ್ದೇಶಕ ಬಾಲಾ ನಿರ್ದೇಶನದ ಮತ್ತು ವಿಶಾಲ್ ಅಭಿನಯದ ‘ಅವನ್ ಇವನ್’ ಚಿತ್ರದಲ್ಲಿ ವಿಶಾಲ್​ ಲುಕ್ ಬದಲಿಸಿದ್ದೆ ಅವರ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಆರೋಪ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ನಟ ವಿಶಾಲ್​ ಸತತವಾಗಿ ಹಿಟ್ ಚಿತ್ರಗಳನ್ನು ನೀಡುತ್ತಿದ್ದರು. ನಿರ್ದೇಶಕ ಏನ್ ಹೇಳಿದ್ರೂ ವಿಶಾಲ್ ಮಾಡ್ತಿದ್ರು. ಅವನ್​ ಇವನ್​ ಸಿನಿಮಾದಲ್ಲಿ ವಿಶಾಲ್ ದೃಷ್ಟಿ ನಾರ್ಮಲ್ ಆಗಿರಬಾರದು, ಸ್ವಲ್ಪ ಚೇಂಜ್ ಬೇಕು ಅಂತ ನಿರ್ದೇಶಕ ಬಾಲ ಹೇಳಿದ್ರು. ಅದಕ್ಕಾಗಿಯೇ ಅವರು ಕಣ್ಣಿಗೆ ಆಪರೇಷನ್ ಮಾಡಿಸಿದ್ರು.  ದೃಷ್ಟಿ ಬದಲಾಯಿಸಲು, ಕಣ್ಣಿನ ಗುಡ್ಡೆಗಳನ್ನು ಎಳೆದು ಹೊಲಿಗೆ ಹಾಕಿದ್ರು, ಶೂಟಿಂಗ್ ಮುಗಿದ ಬಳಿಕ ‘ಅವನ್ ಇವನ್’ ಡಬ್ಬಿಂಗ್ ವೇಳೆ ವಿಶಾಲ್ ದೃಷ್ಟಿ ಸರಿಯಾಗಿದ್ದರೂ ಅವರ ದೃಷ್ಟಿ ತಾನಾಗಿಯೇ ಬದಲಾಗುತ್ತಿತ್ತು . ವಿಶಾಲ್‌ ಅವರಿಗೆ ಆರೋಗ್ಯ ಸಮಸ್ಯೆಯೂ ಶುರುವಾಯಿತು. ಅವರು ಆಗಾಗ್ಗೆ ಮೈಗ್ರೇನ್ ಹೊಂದಿದ್ದರು. ಹಲವು ಚಿಕಿತ್ಸೆಗಳನ್ನು ತೆಗೆದುಕೊಂಡರೂ ಪರಿಹಾರ ಸಿಗಲಿಲ್ಲ. ಕೆಲವು ಕೆಟ್ಟ ಚಟಗಳಿಗೆ ಬಿದ್ದಿದ್ದರು. ಇದರ ಪರಿಣಾಮ ಇಂದು ವಿಶಾಲ್ ಈ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ ಎಂದು ವಿಡಿಯೋದಲ್ಲಿ ವ್ಯಕ್ತಿ ವಿವರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಈ ವಿಡಿಯೋದಲ್ಲಿ ಎಷ್ಟು ಸತ್ಯಾಂತವಿದೆ ಅನ್ನೋದು ತಿಳಿದಿಲ್ಲ.

ವಿಶಾಲ್​ ನಟಿಸಿರುವ,​ 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ‘ಮದಗಜರಾಜ’ ಚಿತ್ರ ಈಗ ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಸಿನಿಮಾ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net