

ಹೈದ್ರಾಬಾದ್: ( Actor Vishal Facing Health Issues ) ತಮಿಳಿನ ಖ್ಯಾತ ನಟ ವಿಶಾಲ್ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ವೊಂದರಲ್ಲಿ ಮೈಕ್ ಹಿಡಿದಾಗ ಕೈ ನಡುಗುತ್ತಿತ್ತು, ತೊದಲುತ್ತಾ ಮಾತನಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಗೆ ನಟನಿಗೆ ಏನಾಗಿದೆ? ಎಂದು ಆತಂಕಕ್ಕೊಳಗಾಗಿದ್ದಾರೆ.
ಸುಂದರ್ ಸಿ ನಿರ್ದೇಶನದ, ನಟ ವಿಶಾಲ್ ಅಭಿನಯದ 'ಮದ ಗಜರಾಜ' ಯಾವಾಗ ಬಿಡುಗಡೆಯಾಗುತ್ತಿದೆ. ಪೊಂಗಲ್ ಹಬ್ಬಕ್ಕೆ ಜನವರಿ 12ರಂದು ಬಿಡುಗಡೆಯಾಗಲಿದೆ. 13 ವರ್ಷಗಳ ನಂತರ ಚಿತ್ರ ಬಿಡುಗಡೆಯಾಗುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಮದಗಜರಾಜ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಂದರ್ ಸಿ, ನಟ ವಿಶಾಲ್, ಸಂಗೀತ ಸಂಯೋಜಕ ವಿಜಯ್ ಆಂಟೋನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆಗ ಚಿತ್ರದ ನಟ ವಿಶಾಲ್, “ಎಲ್ಲರಿಗೂ ಶುಭ ಸಂಜೆ.. ಮತ್ತೆ ಮೊದಲಿನಂತೆ ನಿರ್ಮಾಣ ಕಾರ್ಯಕ್ಕೆ ಬರಬೇಕೆಂಬುದು ಜೆಮಿನಿ ಪ್ರೊಡಕ್ಷನ್ ಕಂಪನಿಯ ಆಸೆ. ನಿರ್ಮಾಣ ಕಂಪನಿಗಳು ಉದಯೋನ್ಮುಖ ನಿರ್ದೇಶಕರಿಗೆ ಸೃಜನಶೀಲ ಸಾಮರ್ಥ್ಯವನ್ನು ನೀಡುವ ಸಾಧ್ಯತೆ ಕಡಿಮೆ. ಇದನ್ನು ಖಂಡಿತವಾಗಿ ಜೆಮಿನಿ ಪ್ರೊಡಕ್ಷನ್ಸ್ ಒದಗಿಸಲಿದೆ ಎಂದಿದ್ದಾರೆ.
ಮದಗಜ ರಾಜ ಚಿತ್ರಕ್ಕೆ ನನಗೆ ಉತ್ತಮ ನಟ ಪ್ರಶಸ್ತಿ ಬರದಿದ್ದರೂ ಪರವಾಗಿಲ್ಲ. ಆದರೆ, ಅತ್ಯುತ್ತಮ ಗಾಯಕ ಪ್ರಶಸ್ತಿ ಲಭ್ಯವಾಗಲಿದೆ. ನಾನು ಇಲ್ಲಿ ಒಂದು ಘಟನೆಯನ್ನು ಹೇಳಬಯಸುತ್ತೇನೆ. ನಾನು ಇದೀಗ ವಿಜಯ್ ಆಂಟೋನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನನ್ನು ಹಾಡುವಂತೆ ಮಾಡಿದ್ದು ವಿಜಯ್ ಆಂಟನಿ. ನೀನು ಎಂಥ ಗಾಯಕ” ಎಂದು ಹೇಳುವಾಗ ವಿಶಾಲ್ ಕೈಗಳು ಜೋರಾಗಿ ನಡುಗುತ್ತಿದ್ದವು. ಅವರು ನಡುಗುವ ಧ್ವನಿಯಲ್ಲಿ ಮಾತನಾಡಿದರು. ನಂತರ ವಿಶಾಲ್ ಗೆ ಸೋಫಾ ಹಾಕಿ ಕುಳಿತುಕೊಳ್ಳು ವ್ಯವಸ್ಥೆ ಮಾಡಲಾಯಿತ್ತು. ಆ ಬಳಿಕ ನಿರ್ದೇಶಕ ಸುಂದರ್ ಸಿ ಹಾಗೂ ಸಂಗೀತ ಸಂಯೋಜಕ ವಿಜಯ್ ಆಂಟೋನಿ ಅವರನ್ನು ಸೋಫಾ ಮೇಲೆ ಕೂರಿಸಿಕೊಂಡು ಮೂವರನ್ನು ವೇದಿಕೆ ಮೇಲೆ ಕೂರಿಸಿ ಮಾತು ಆರಂಭಿಸಿದರು.
ನಟ ವಿಶಾಲ್ ಅವರ ನೂತನ ಸಿನೆಮಾ ಮದಗಜರಾಜ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ , ಅದರಲ್ಲಿ ನಟ ವಿಶಾಲ್ ಮೈಕ್ ಹಿಡಿದಾಗ ಕೈ ನಡುಗುತ್ತಿತ್ತು. ಮಾತನಾಡಲು ಕಷ್ಟ ಪಡುತ್ತಿದ್ದರು ಅನಾರೋಗ್ಯದಿಂದ ಬಳಲುತ್ತಿರುವುದು ಕಂಡು ಬಂತ್ತು. ನಟ ವಿಶಾಲ್‌ಗೆ ಏನಾಗಿದೆ ಎಂದು ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.