'ಟೈಂ ಪಾಸ್‌ಗಾಗಿ ರಾಜಕೀಯಕ್ಕೆ ಬಂದಿಲ್ಲ': Actor Vijay

vijay
Published on

ಚೆನ್ನೈ: ನಾನು ಖ್ಯಾತಿ ಅಥವಾ 'ಟೈಂ ಪಾಸ್‌ಗಾಗಿ ರಾಜಕೀಯಕ್ಕೆ ಬಂದಿಲ್ಲ, ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ತಮಿಳಗ ವೆಟ್ರಿಕಳಗಂ (ಟಿವಿಕೆ) ನಾಯಕ ಮತ್ತು ನಟ ವಿಜಯ್­(Actor Vijay) ಹೇಳಿದ್ದಾರೆ.

ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಅ. 27ರಂದು ಮಹಾನಾಡು ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾನಾಡಿ, ಇದೇ ಮೊದಲ ಬಾರಿಗೆ ಕಾರ್ಯಕರ್ತರಿಗೆ ಪತ್ರ ಬರೆಯುತ್ತಿದ್ದೇನೆ. ಹತ್ತಾರು ವರ್ಷಗಳಿಂದ ಸಮಸ್ಯೆಗಳು ಬಗೆಹರಿಯದೆ ಉಳಿದುಕೊಂಡಿವೆ. ರಾಜ್ಯದ ಜನತೆ ಇವುಗಳನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಿ ಜನಪರ ಇರುವವರನ್ನು ಬೆಂಬಲಿಸಬೇಕು ಎಂದರು.

ಪಕ್ಷದ ಮಹಾನಾಡು ಮುಹೂರ್ತಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಪಕ್ಷದ ಗುರಿ ಏನೆಂಬುದನ್ನು ಬಹಿರಂಗಪಡಿಸಲು ಈ ಮಹಾನಾಡು ಆಯೋಜಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net