Musk: ಕೋರ್ಟ್ ವಿಧಿಸಿದ್ದ ದಂಡ ತಪ್ಪು ಖಾತೆಗೆ ವರ್ಗಾಯಿಸಿದ ಎಲಾನ್ ಮಸ್ಕ್! ಬ್ರೆಜಿಲ್​ನಲ್ಲಿ 'X'​ ಮೇಲೆ ಮುಂದುವರಿದ ನಿಷೇಧ!

musk
Published on

ಬ್ರೆಸಿಲಿಯಾ (ಬ್ರೆಜಿಲ್): ಎಕ್ಸ್​(X) ಮೇಲಿನ ನಿಷೇಧವನ್ನು ತೆಗೆದುಹಾಕಲು ಬ್ರೆಜಿಲ್ ನ್ಯಾಯಾಲಯ ವಿಧಿಸಿದ್ದ ದಂಡ ಪಾವತಿಸುವಾಗ ಟೆಸ್ಲಾ ಸಿಇಒ ಎಲಾನ್ ಮಸ್ಕ್(Musk) ಅವರು ದಂಡವನ್ನು ತಪ್ಪು ಖಾತೆಗೆ ಪಾವತಿಸಿದ್ದಾರೆ.

ಸುಳ್ಳು ಮಾಹಿತಿ ಹರಡಿದ ಆರೋಪ ಹೊತ್ತಿರುವ ಎಕ್ಸ್​ ಗೆ ಆದರೆ ಎಕ್ಸ್ ಗೆ ಬ್ರೆಜಿಲ್​ ನ್ಯಾಯಾಲಯ 5.2 ಮಿಲಿಯನ್ (43 ಕೋಟಿ ರೂ.) ದಂಡ ವಿಧಿಸಿದ್ದು ಅದನ್ನು ವರ್ಗಾಯಿಸುವಾಗ ಬೇರೆ ಖಾತೆಗೆ ಹಣವನ್ನು ಪಾವತಿಸಲಾಗಿದೆ. ಇದನ್ನು ನ್ಯಾಯಾಧೀಶ ಮೊರೇಸ್ ಬಹಿರಂಗಪಡಿಸಿದ್ದಾರೆ. ಈ ನಡುವೆ ನ್ಯಾಯಾಲಯ ಖಾತೆಗೆ ದಂಡ ಇನ್ನೂ ಸೇರದ ಪರಿಣಾಮ ಬ್ರೆಜಿಲ್‌ನಲ್ಲಿ ಎಕ್ಸ್​ ಮೇಲಿನ ನಿಷೇಧ ಮುಂದುವರೆದಿದೆ.

ಬ್ರೆಜಿಲ್‌ನಲ್ಲಿ ಈ ಹಿಂದೆ ಸುಳ್ಳು ಮಾಹಿತಿಯನ್ನು ಹರಡಿದ ಆರೋಪದಡಿ ಪ್ರಮುಖ ಸಾಮಾಜಿಕ ಮಾಧ್ಯಮ ಎಕ್ಸ್​ನ ಹಲವು ಖಾತೆಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಲೆಕ್ಸಾಂಡರ್ ಡಿ ಮೊರಾಸ್ ಆದೇಶಿಸಿದ್ದರು. ಆದರೆ ಎಕ್ಸ್​ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಎಕ್ಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ ನ್ಯಾಯಾಲಯ ವಿರುದ್ಧ ಎಕ್ಸ್ ನ ಮಾಲೀಕ ಎಲಾನ್ ಮಸ್ಕ್ ಪ್ರತಿಕ್ರಿಯಿಸಿ, ಇದು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ನ್ಯಾಯಾಧೀಶರು ರಾಜಕೀಯ ಲಾಭಕ್ಕಾಗಿ ಈ ಆದೇಶ ನೀಡಿದ್ದಾರೆ ಎಂದು ಟೀಕಿಸಿದ್ದರು.

ಇದಾದ ಬಳಿಕ ಮಸ್ಕ್ ವಿವಾದಾತ್ಮಕ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆಂದು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net