

ಭಾರತೀಯ ಸಂಗೀತ ಪರಂಪರೆಯಲ್ಲಿ ಸ್ವರ ಸಾಮ್ರಾಜ್ಞೆ ಎಂ.ಎಸ್.ಸುಬ್ಬಲಕ್ಷ್ಮೀ ಹೆಸರು ಚಿರಸ್ಥಾಯಿ. ಕರ್ನಾಟಕ ಸಂಗೀತದ ಮೂಲಕ ಜಗತ್ತಿನಾದ್ಯಂತ ಗಾನಸುಧೆ ಹರಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರ ಸಂಗೀತ ಸೇವೆಗೆ ಹಲವು ಬಿರುದು, ಬಹುಮಾನಗಳು ಸಂದಿವೆ. ಇದರಲ್ಲಿ ರಾಮನ್ ಮ್ಯಾಗ್ನೆಸ್ಸೆ ಪ್ರಶಸ್ತಿ (1974), ಭಾರತ ರತ್ನ (1998) ಸೇರಿ ಹಲವು ಗೌರವಗಳು ಅವರಿಗೆ ದೊರೆತಿವೆ. ಸೋಮವಾರ ಸುಬ್ಬಲಕ್ಷ್ಮೀ ಅವರ 108ನೇ ಜನ್ಮದಿನವನ್ನು ಜಗತ್ತಿನಾದ್ಯಂತ ಸಂಗೀತ ಪ್ರೇಮಿಗಳು ಆಚರಿಸಿದ್ದಾರೆ. ವಿಶೇಷ ಏನೆಂದರೆ, ಬಾಲಿವುಡ್ ನಟಿ ವಿದ್ಯಾ ಬಾಲನ್, ಎಂ.ಎಸ್.ಸುಬ್ಬಲಕ್ಷ್ಮೀ ಗೆಟಪ್‌ನಲ್ಲಿ ಕಾಣಿಸಿಕೊಂಡು ಅವರಿಗೆ ನಮನ ಸಲ್ಲಿಸಿದ್ದಾರೆ. ವಸ ವಿನ್ಯಾಸಕಿ ಅನು ಪಾರ್ಥಸಾರಥಿ ಕ್ರಿಯಾಶೀಲವಾಗಿ ವಸ ವಿನ್ಯಾಸ ಮಾಡಿದ್ದು, ಹೊಸ ಗೆಟಪ್‌ನಲ್ಲಿ ವಿದ್ಯಾ ಥೇಟ್ ಸುಬ್ಬಲಕ್ಷ್ಮೀಯಂತೆ ಕಾಣುತ್ತಾರೆ. ಸುಬ್ಬಲಕ್ಷ್ಮೀ ಅವರು ಧರಿಸುತ್ತಿದ್ದ ಶೈಲಿಯಲ್ಲೇ ಸೀರೆಯುಟ್ಟು, ಮೂಗಿಗೆ ನತ್ತು, ಹಣೆಗೆ ಕುಂಕುಮ ಹಚ್ಚಿದ್ದು, ತಲೆಗೆ ಮಲ್ಲಿಗೆ ಮುಡಿದು ಸರಳವಾಗಿ ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್, ಸುಬ್ಬಲಕ್ಷ್ಮೀ ಅವರ ನಾಲ್ಕೈದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಅದರ ವಿಡಿಯೋ ಮತ್ತು ೆಟೋಗಳು ಎಲ್ಲೆಡೆ ವೈರಲ್ ಆಗಿವೆ. ಗೆಟಪ್ ಸಂಬಂಧಿಸಿದಂತೆ ನಟಿ ವಿದ್ಯಾ ಬಾಲನ್, ‘ಎಂ.ಎಸ್.ಸುಬ್ಬಲಕ್ಷ್ಮೀ ಅವರ ೆಟೋಗ್ರಾಫಿಕ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ. ಸದ್ಯ ವಿದ್ಯಾ ನಟಿಸಿರುವ ‘ಭೂಲ್ ಭುಲಯ್ಯ-3’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.-ಏಜೆನ್ಸೀಸ್