

ಬೆಂಗಳೂರು: ಕಿರುತೆರೆ ನಟ ವರುಣ್ ಆರಾಧ್ಯ ಅವರ ಕುಚಿಕು ಗೆಳೆಯ ತೇಜಸ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದ ಇನ್‌ಫ್ಲೂಯೆನ್ಸರ್ ತೇಜಸ್. ಕೆಲಸದ ನಿಮಿತ್ತ ತೇಜಸ್ ಹಾಗೂ ಇನ್ನೊಬ್ಬ ಸ್ನೇಹಿತ ಜೊತೆಯಲ್ಲಿ ತೆರಳುತ್ತಿದ್ದರು. ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ತೇಜಸ್ ಮೃತಪಟ್ಟಿದ್ದಾನೆ. ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತೇಜಸ್ ನಿಧನ ಹಿನ್ನೆಲೆಯಲ್ಲಿ ಕಿರುತೆರೆಯ ಹಲವು ನಟರು ಕಂಬನಿ ಮಿಡಿಯುತ್ತಿದ್ದಾರೆ.ತೇಜಸ್ ಅವರ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಭಾವುಕರಾಗಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವರುಣ್, ನನಗೆ ಈಗಲೂ ನಂಬಲು ಆಗುತ್ತಿಲ್ಲ. ಸಾಧ್ಯವಾದ್ರೆ ಮತ್ತೆ ಹುಟ್ಟಿ ಬಾ. ನೀನು ನನ್ನ ಪಾಲಿಗಿದ್ದ ಒಬ್ಬನೇ ಸಹೋದರ. ಯಾಕೆ ಇಷ್ಟು ಬೇಗ ನನ್ನ ಬಿಟ್ಟು ಹೋದೆ. ದಯವಿಟ್ಟು ವಾಪಸ್ ಎಂದು ಹೇಳಿದ್ದಾರೆ.