ಜಾನ್ವಿ ಕಪೂರ್ ಕಿವಿ ಕಚ್ಚಿದ ವರುಣ್ ಧವನ್; ತರಾಟೆಗೆ ತೆಗೆದುಕೊಂಡ ನೆಟ್ಟಿಗರು!

Untitled design (90)
Published on

ಮುಂಬೈ: 'ಬಾವಾಲ್​' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬಾಲಿವುಡ್​​ ನಟ ವರುಣ್​ ಧವನ್​ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಟ್ರೋಲ್​​ಗೆ ತುತ್ತಾಗಿದ್ದಾರೆ.

ವರುಣ್​ ಧವನ್​ ಮತ್ತು ಜಾನ್ವಿ ಕಪೂರ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ 'ಬಾವಾಲ್' ಚಿತ್ರದ ಪ್ರಚಾರಕ್ಕಾಗಿ ಫೋಟೋ ಶೂಟ್​​ ನಡೆಸಲಾಗಿತ್ತು. ಫೋಟೋ ತೆಗೆಸಿಕೊಳ್ಳಲು ಇಬ್ಬರು ಕಪ್ಪು ಬಣ್ಣದ ಉಡುಗೆಯನ್ನು ತೊಟ್ಟು ಮಿಂಚಿದರು. ಈ ವೇಳೆ ವರುಣ್,​ ನಟಿ ಜಾನ್ವಿ ಅವರ ಕಿವಿಯನ್ನು ತಮಾಷೆಯಾಗಿ ಕಚ್ಚುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ಗಮನಿಸಿದ ನೆಟ್ಟಿಗರು ನಟನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವ್ಯಾಪಕವಾಗಿ ಟ್ರೋಲ್​ ಮಾಡಿದ್ದಾರೆ.

ಸದ್ಯ ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡಿರುವ 'ಬಾವಾಲ್'​ ಚಿತ್ರದ ಟ್ರೇಲರ್​ ವೀಕ್ಷಿಸಿದ ಸಿನಿಪ್ರೇಕ್ಷಕರು ನಟ ವರುಣ್ ಧವನ್​ ಮತ್ತು ಜಾನ್ವಿ ಕಪೂರ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸಿರುವ ಈ ಚಿತ್ರವು, ವಲ್ಡ್​​ ವಾರ್​ 2ರ ಹಿನ್ನೆಲೆಯನ್ನು ಆಧರಿಸಿದೆ ಎಂದು ಹೇಳಲಾಗಿದೆ.

ಸಾಜಿದ್ ನಾಡಿಯಾಡ್ವಾಲಾ ಮತ್ತು ಅಶ್ವಿನಿ ಅಯ್ಯರ್ ತಿವಾರಿ ನಿರ್ಮಿಸಿದ ಈ ಸಿನಿಮಾದ ಕಥೆಯೂ, ಇಬ್ಬರು ನವವಿವಾಹಿತರು ತಮ್ಮ ಹನಿಮೂನ್‌ಗಾಗಿ ಯುರೋಪ್‌ಗೆ ಪ್ರಯಾಣಿಸುವ ಮತ್ತು ಅವರ ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಸುತ್ತ ಸುತ್ತುವರಿದಿದೆ ಎಂದು ಸಿನಿ ವರದಿ ಹೇಳಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net