VIDEO | ಹಳೆಯ ಅಕ್ಕಿ ಚೀಲದಿಂದ ಸ್ಟೈಲಿಶ್ ಹ್ಯಾಂಡ್ ಬ್ಯಾಗ್ ತಯಾರಿಸಿದ ನಟಿ

Actor turns old rice bag
Published on

ಮುಂಬೈ: ಕಸದಿಂದ ರಸ ತಯಾರಿಸುವ ಕಲೆ ಇವತ್ತು ನಿನ್ನೆಯದಲ್ಲ. ಬೇಡವಾದ ವಸ್ತುಗಳಿಂದ ಬಳಕೆಗೆ ಬರುವ ವಸ್ತುಗಳನ್ನು ತಯಾರಿಸಬಹುದಾಗಿದೆ. ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿರುವ ವಿಡಿಯೋವೊಂದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ವೇತಾ ಮಹಾದಿಕ್ ಅವರು, ಹಳೆಯ ಅಕ್ಕಿ ಚೀಲವನ್ನು ಬಳಸಿ ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಆಗಿ ಪರಿವರ್ತಿಸಿದ್ದಾರೆ. ಇದೇ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಉರ್ಫಿ ಜಾವೇದ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಟಿ ಶ್ವೇತಾ ಮಹಾದಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಅಕ್ಕಿ ಚೀಲವನ್ನು ತುಂಡು ತುಂಡುಗಳಾಗಿ ಕತ್ತರಿಸಿಕೊಂಡಿದ್ದಾರೆ. ಬ್ಯಾಗ್ ತಯಾರಿಸಲು ಬೇಕಾದಂತೆ ಕತ್ತರಿಸಿ ನಂತರ ನೆರಿಗೆ ನೆರಿಗೆಯಾಗಿ ಹೊಲಿದು ಮಧ್ಯದಲ್ಲಿ ಜಿಪ್ ಕೂರಿಸಿ ಎರಡು ಕೈಗಳನ್ನು ಅಳವಡಿಸಿ ಸುಂದರವಾದ ಬ್ಯಾಗ್ ನಿರ್ಮಿಸಲಾಗಿದೆ. ನಂತರ ಸ್ಟೈಲಿಶ್‌ ಆಧುನಿಕ ಧಿರಿಸಿನ ಜೊತೆ ಈ ಬ್ಯಾಗ್ ಹಿಡಿದು ಶ್ವೇತಾ ಮಹಾದಿಕ್ ಫೋಸ್ ನೀಡಿದ್ದಾರೆ.

ಈ ವಿಡಿಯೋ ನೋಡಿ ನಟಿ ಉರ್ಫಿ ಜಾವೇದ್ ಕೂಡ ಇಂಪ್ರೆಸ್ ಆಗಿದ್ದು ಕಾಮೆಂಟ್ ಮಾಡಿದ್ದಾರೆ. ನಿಮಗೆ ವಿಶ್ವದ ಅತ್ಯಂತ ಪರಿಸರ ಸ್ನೇಹಿ ಕಲಾವಿದ ಪ್ರಶಸ್ತಿಯನ್ನು ನೀಡಬೇಕು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net