ಬೊಮ್ಮಾಯಿ‌ ಮಾಮಾ ನಾಮ್ ಕೆ ವಾಸ್ತೆ‌ ಅಲ್ಲ..ಕಾಮ್ ಕೆ ವಾಸ್ತೆ‌: ಸುದೀಪ್​

sudeepp
Published on

ಹಾವೇರಿ: ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸುವ ಸಂಬಂಧ ಏರ್ಪಡಿಸಿರುವ “ರೋಡ್ ಶೋ”ಗೆ ಜನಸಾಗರವೇ ಹರಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಸಾಥ್​​ ನೀಡಿದ್ದಾರೆ.

ಶಿಗ್ಗಾಂವಿಯಲ್ಲಿ ‌ಕಿಚ್ಚ ಸುದೀಪ ಮಾತನಾಡಿ, ಮೊದಲ ಬಾರಿಗೆ ಶಿಗ್ಗಾಂವಿಗೆ ಬಂದಿದ್ದೇನೆ. ಸಂತ ಶಿಶುವಿನಹಾಳರ ಭೂಮಿಯಲ್ಲಿ ಪ್ರಚಾರ ಶುರು ಮಾಡಿದ್ದು‌ ಖುಷಿ‌ ಇದೆ. ಸಿಎಂ ಅವರಿಗಾಗಿ ಬಂದಿದ್ದೇನೆ. ತುಂಬ ಕಡಿಮೆ‌ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ‌ ಮಾಡಿದ ಬೊಮ್ಮಾಯಿ‌ ಮಾಮಾ ಎಂದಿದ್ದಾರೆ.

ನಾಮ್ ಕೆ ವಾಸ್ತೆ‌ ಅಲ್ಲ ಕಾಮ್ ಕೆ ವಾಸ್ತೆ‌ ಎಂಬುದನ್ನು ಬೊಮ್ಮಾಯಿ‌ ಮಾಮಾ‌ ತೋರಿಸಿದ್ದಾರೆ. ಅವರನ್ನು ನೀವು ಸ್ವಾಗತಿಸಿದ್ದು, ಪ್ರೀತಿ‌ ನೋಡಿ ಗೊತ್ತಾಯಿತು ಅವರ ತಾಕತ್ತು ಎಂದು ನಟ ಸುದೀಪ್​​ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹಾಡಿಹೊಗಳಿದ್ದಾರೆ.

ಈಗ ಅವರ ಪರ ನಾನೂ ಬಂದಿದ್ದೇನೆ. ನಾನು ಒಬ್ಬ ಭಾರತೀಯ ನಾಗಿ ಪ್ರಧಾನಿ ಮೋದಿ ಅವರು ಮಾಡಿದ ಎಷ್ಟೋ ಕೆಲಸಗಳನ್ನು ಮೆಚ್ಚುತ್ತೇನೆ. ವಿದೇಶಗಳಿಗೆ ಹೋದಾಗ ಗೊತ್ತಾಗುತ್ತದೆ. ನಾವು ಸುಮ್ಮಸುಮ್ಮನೆ ಕ್ಯಾಂಪೇನ್‌ಗೆ ಇಳಿಯಲ್ಲ. ಕೆಲಸ‌ ಮಾಡುವವರ ಕಡೆಗೆ ಬರುತ್ತೇವೆ ಎಂದು ಹೇಳಿದ್ದಾರೆ.

ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆಯ ಜನ ಎಂಬುದನ್ನು ನಂಬಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ ಎಂದು ಹೆಳುವ ಮೂಲಕವಾಗಿ ಬೊಮ್ಮಾಯಿ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net