'ನನ್ನ ಆರೋಪ ಸತ್ಯ, ಹಿಂದೆ ಸರಿಯೋ ಮಾತೇ ಇಲ್ಲ': ಜಯಸೂರ್ಯಗೆ ತಿರುಗೇಟು ನೀಡಿದ ಮಲ್ಹಾರ್

malhar
Published on

ನವದೆಹಲಿ:ಮಲಯಾಳಂ ನಟ ಜಯಸೂರ್ಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿರುವ ನಟಿ ಸೋನಿಯಾ ಮಲ್ಹಾರ್, ಆರೋಪಿಗಳು ನನ್ನ ಆರೋಪಗಳನ್ನು ಸುಳ್ಳು ಎಂದು ಕಾನೂನು ಕ್ರಮಕ್ಕೆ ಬೆದರಿಕೆ ಹಾಕಿದರೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಯಸೂರ್ಯ ನನ್ನ ಆರೋಪವನ್ನು ಸುಳ್ಳು ಎನ್ನುತ್ತಿದ್ದಾರೆ. ಇದು ಸುಳ್ಳು ಆರೋಪವಲ್ಲ. ನನ್ನ ಹೇಳಿಕೆ ತುಂಬಾ ನಿಜ ಮತ್ತು ಸ್ಪಷ್ಟವಾಗಿದೆ. ಇದು ನನ್ನ ಜೀವನದಲ್ಲಿ ನಾನು ದಾಖಲಿಸಿದ ಮೊದಲ ಎಫ್‌ಐಆರ್ ಎಂದು ತಿಳಿಸಿದ್ದಾರೆ.

ಜಯಸೂರ್ಯ ಮತ್ತೊಂದು ಮೀಟೂ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ತನ್ನ ಹೆಸರನ್ನು ಹೇಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ. ಆದರೆ ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾಲಿವುಡ್​ನಲ್ಲಿ ಜಸ್ಟೀಸ್​ ಹೇಮಾ ಸಮಿತಿಯ ವರದಿ ಬಂದ ನಂತರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ತನ್ನ ಮೇಲಾದ ದೌರ್ಜನ್ಯವನ್ನು ಬಹಿರಂಗಪಡಿಸಿದ ಅನೇಕ ನಟಿರಲ್ಲಿ ಮಲ್ಹಾರ್ ಸಹ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net